ಮಠಾಧೀಶರು ಹಮ್ಮಿಕೊಂಡಿರುವ ಕಾಯಂ ಸತ್ಯಾಗ್ರಹಕ್ಕೆ ಬೆಂಬಲ : ಹೆಚ್.ಡಿ.ರೇವಣ್ಣ

ರೇವಣ್ಣ, 20 ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ಆಡಳಿತ ನಡೆಸಿವೆ. ಆದರೆ ಬೇಲೂರು ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ವಿಫಲರಾಗಿದ್ದಾರೆ.ಈಗ ಕೆಲವರು ರಾಜ ಕಾರಣಕ್ಕಾಗಿ ದೇವೇಗೌಡ ಮತ್ತು ಜೆಡಿಎಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ರೇವಣ್ಣ ವಾಗ್ದಾಳಿ ನಡೆಸಿದರು.
ಮಾದಿಹಳ್ಳಿ, ಹಳೇಬೀಡು, ಜಾವಗಲ್ ಹೋಬಳಿಗಳಿಗೆ ಶಾಶ್ವತ ನೀರಿನ ಸೌಲಭ್ಯ ಒದಗಿಸುವಂತೆ ಬೇಲೂರಿನಲ್ಲಿ ಮಠಾಧೀಶರು ಹಮ್ಮಿಕೊಂಡಿರುವ ನಿರಂತರ ಸತ್ಯಾಗ್ರಹಕ್ಕೆ ಜೆಡಿಎಸ್‍ನಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು. ಯಗಚಿ ಅಣೆಕಟ್ಟೆ ಕಟ್ಟುವಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪಾತ್ರ ಪ್ರಮುಖವಾಗಿದೆ. ಯಗಚಿ ಜಲಾಶಯದಿಂದ ಹಾಸನ ಹಾಗು ಆಲೂರು ತಾಲೂಕಿನ ಕೆಲ ಭಾಗಗಳಿಗೆ ನೀರು ಹರಿಸಲಾಗಿದೆಯೇ ಹೊರತು ಹೊಳೆನರಸೀಪುರ ತಾಲೂಕಿಗೆ ನೀರು ಹರಿಸಿಲ್ಲ. ಹೊನಪುರಕ್ಕೆ ಯಗಚಿ ನೀರು ಹರಿಯುತ್ತಿದ್ದರೆ ಅದನ್ನು ತಡೆಯಲಿ ನಮ್ಮ ಅಭ್ಯಂತರ ಇಲ್ಲ. ಜೆಡಿಎಸ್ ಅವಧಿಯಲ್ಲಿ ನೀರಾವರಿ ಸೌಲಭ್ಯಗಳಿಗೆ ಆದ್ಯತೆ ನೀಡಿರುವ ಬಗ್ಗೆ ಸಚಿವರ ಮಾಹಿತಿ ಪಡೆದುಕೊಂಡು ದಾಖಲೆ ಸಮೇತ ಮಾತನಾಡಬೇಕು ಎಂದರು.
Comments