ಅಮೆರಿಕಕ್ಕೆ ಹೊರಟಿದ್ದ ಮಹಿಳೆ ಬ್ಯಾಗ್ನಲ್ಲಿ ಸ್ಯಾಟಲೈಟ್ ಫೋನ್ ಪತ್ತೆ, ಏನಿದು ?

ಬೆಂಗಳೂರಿನಿಂದ ಮುಂಬೈ ಮೂಲಕ ಅಮೆರಿಕಕ್ಕೆ ಹೊರಟಿದ್ದ ಮಹಿಳೆ ಹ್ಯಾಂಡ್ ಬ್ಯಾಗನ್ನು ತಪಾಸಣೆ ಮಾಡಿದಾಗ ಸ್ಯಾಟಲೈಟ್ ಫೋನ್ ಪತ್ತೆಯಾಗಿದೆ. ಈ ಘಟನೆ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಜೆಟ್ ಏರ್‌ವೇಸ್ ವಿಮಾನ ಸಂಖ್ಯೆ 9W488 ನಲ್ಲಿ ಹೊರಡಲು ಸಿದ್ಧವಾಗಿದ್ದ ಅಮೆರಿಕದ ಪ್ರಜೆ ಪರ್ಲ್ ಎಂಜಾಲ್ ಮೆಕ್ಕಾನ್ಸ್ ಎಂಬಾಕೆಯ ಬ್ಯಾಗ್ನಲ್ಲಿ ಸ್ಯಾಟಲೈಟ್ ಫೋನ್ ಪತ್ತೆಯಾಗಿದೆ. ನಿನ್ನೆ ಸಂಜೆ 6 ಗಂಟೆ 10 ನಿಮಿಷದಲ್ಲಿ ಡಿಪಾರ್ಚರ್‌ಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಪತ್ತೆಯಾದ ಫೋನ್ ಬಗ್ಗೆ ಮಹಿಳೆ ಯಾವುದೇ ದಾಖಲಾತಿ ನೀಡಿಲ್ಲ. ಅಂದಹಾಗೆ ಭಾರತದಲ್ಲಿ ಸ್ಯಾಟಲೈಟ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದೆ. ಹೀಗಾಗಿ CISF ಅಧಿಕಾರಿ ಎಂ ಎಸ್ ಯಾದವ್ ಅವರಿಂದ KIAL ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಇಂಡಿಯನ್ ವೈರ್ಲೆಸ್ ಆ್ಯಕ್ಟ್, ಇಂಡಿಯನ್ ಟೆಲಿಗ್ರಫಿ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments