ಮೈಸೂರಿನ ಕರಿ ಬಸವ ಇದೀಗ ಬಣ್ಣ ಬದಲಿಸಿ ಬಿಳಿ ಬಸವನಾಗಿದ್ದಾನೆ...!!
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಂಡಿಯೂರಿ ಕುಳಿತಿರುವ ನಂದಿ ವಿಗ್ರಹ ಯಾವ ಬಣ್ಣದಲ್ಲಿದೆ ? ಎಂಬ ಈ ಪ್ರಶ್ನೆಗೆ ನಮ್ಮ ಉತ್ತರ ಕಪ್ಪು ಎಂದು. ಆದರೆ ದಸರಾ ಮುಗಿದ ಬೆನ್ನಲ್ಲೇ ಬಸವನ ಬಣ್ಣವನ್ನೇ ಬದಲಿಸಿದೆ ಸರ್ಕಾರ, ಕಪ್ಪು ಬಣ್ಣದ ಬಸವ ಇದೀಗ ಬಿಳಿ ಬಣ್ಣಕ್ಕೆ ತಿರುಗಿದೆ .
ಏನಪ್ಪ ಅಂತೀರಾ , ಹೌದು ಮೈಸೂರಿನ ಈ ನಂದಿ ವಿಗ್ರಹದ ಮೂಲ ಬಣ್ಣ ಬಿಳಿನೇ ಆದ್ರೆ ಎಣ್ಣೆ ಮಜ್ಜನ ಮಾಡಿಸಿ ಈ ವಿಗ್ರಹ ತನ್ನ ಮೂಲ ಬಣ್ಣವನ್ನು ಕಳೆದು ಕೊಂಡು ಕಪ್ಪಾಗಿತ್ತು. ಈಗ ಧಾರ್ಮಿಕ ದಟ್ಟ ಇಲಾಖೆಯವರು ರಾಸಾಯನಿಕವನ್ನು ಬಳಸಿ ವಿಗ್ರಹವನ್ನು ಸ್ವಚ್ಛಗೊಳಿಸಿ ಮೂಲ ರೂಪಕ್ಕೆ ತಂದಿದ್ದಾರೆ. ಇದ್ರಿಂದ ನಂದಿ ವಿಗ್ರಹ ಬಿಳಿ ಬಣ್ಣದಿಂದ ಮಿಂಚ್ತಿದೆ.
Comments