ಕೋರ್ಟ್ ನೊಳಗೆ ಕುಸಿದು ಬಿದ್ದ ಹನಿಪ್ರೀತ್

ನವದೆಹಲಿ: ಅತ್ಯಾಚಾರಿ ಡೇರಾ ಸಚ್ಚಾ ಸೌದದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂ ದತ್ತು ಪುತ್ರಿ ಹನಿಪ್ರೀತ್ ಸಿಬಿಐ ವಿಶೇಷ ಕೋರ್ಟ್ ಗೆ ಬುಧುವಾರ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಪ್ರತಿಭಟನೆ, ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿರುವ ಆರೋಪದಲ್ಲಿ ಬಂಧಿಯಾಗಿರುವ ಹನಿಪ್ರೀತ್ ಅವರನ್ನು 14 ದಿನ ಕಸ್ಟಡಿಗೆ ನೀಡಲಾಗಿದ್ದು, ಮಂಗಳವಾರ ಮಧ್ಯಾಹ್ನ ಹರ್ಯಾಣ ಪಲೀಸರು ಪಂಜಾಬ್ ನ ಝಿರಕ್ ಪುರ್ ಪಟಿಯಾಲಾ ರಸ್ತೆ ಸಮೀಪ ಹನಿಪ್ರೀತ್ ಹಾಗೂ ಮತ್ತೊಬ್ಬ ಮಹಿಳೆಯನ್ನು ಬಂಧಿಸಿದ್ದರು. ಬಳಿಕ ತಡರಾತ್ರಿ ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ಕರೆದೊಯ್ಯದ್ದರು. ಇಂದು ಕೋರ್ಟ್ ನಲ್ಲಿ ಹೈಡ್ರಾಮಾ ಮಾಡಿದ ಹನಿಪ್ರಿತ್ ಕೋರ್ಟ್ ಕಟಕಟೆಯಲ್ಲಿ ಎರಡು ಕೈಯನ್ನು ಮುಗಿದು ಕಣ್ಣೀರು ಸುರಿಸುತ್ತಾ ನಾನು ನಿರಪರಾಧಿ ಎಂದು ಬೇಡಿಕೊಂಡರು.
Comments