ಯಶಸ್ವಿ ದಸರಾ ಆಚರಣೆ ಬಳಿಕ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ

03 Oct 2017 1:20 PM | General
298 Report

ದಸರಾ ಆಚರಣೆಗೆಂದು 'ಅರ್ಜುನ'ನ ನೇತೃತ್ವದಲ್ಲಿ ಒಟ್ಟು 15 ಆನೆಗಳು ಮೈಸೂರಿಗೆ ಆಗಮಿಸಿದ್ದು, ಯಾವುದೇ ಅಡ್ಡಿ- ಆತಂಕಗಳಿಲ್ಲದೆ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿವೆ. ಇದೀಗ ಆನೆಗಳು ಹಾಗೂ ಮಾವುತರನ್ನು ಲಾರಿಗಳಲ್ಲಿ ಕಳುಹಿಸಿಕೊಡಲಾಗುತ್ತಿದೆ.

ನಾಡಹಬ್ಬ ದಸರಾ ಆಚರಣೆಗಾಗಿ ಮೈಸೂರಿಗೆ ಬಂದಿದ್ದ ಗಜಪಡೆ ಯಶಸ್ವಿ ದಸರಾ ಆಚರಣೆ ಬಳಿಕ ತಮ್ಮ ಮಾವುತರೊಂದಿಗೆ ಕಾಡಿನತ್ತ ಪಯಣಿಸಿವೆ.15 ಆನೆಗಳ ಪೈಕಿ ಈ ಬಾರಿ ಭೀಮ, ದ್ರೋಣ ಹಾಗೂ ಕೃಷ್ಣ ಆನೆಗಳು ಮೊದಲ ಬಾರಿಗೆ ಭಾಗವಹಿಸಿದ್ದು, ತಮ್ಮ ಜವಾಬ್ದಾರಿಯನ್ನು ಸುಸೂತ್ರವಾಗಿ ನಿರ್ವಹಿಸಿವೆ. ಗಜಪಡೆಯನ್ನು ಬೀಳ್ಕೊಡುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಂದೀಪ್, ಶಾಸಕ ಸೋಮಶೇಖರ್ ಮೊದಲಾದವರು ಹಾಜರಿದ್ದರು.

Edited By

Suresh M

Reported By

Madhu shree

Comments