ಗಂಗೆಯಲ್ಲಿ ಜನರು ಇರಲಿ, ಸಾಧು-ಸಂತರೇ ಮುಳುಗೇಳಲು ಹಿಂದೇಟು

ನವದೆಹಲಿ: ಗಂಗೆ ನೀರಿನಲ್ಲಿ ಒಂದು ಹನಿ ನೀರು ತಾಕಿದರು ಏಳೇಳು ಜನ್ಮ ಪಾವನ ವಾಗುತ್ತದೆ ಎಂಬುದು ನಮ್ಮ ಜನರ ನಂಬಿಕೆ , ಆದರೆ ಈಗ? ಗಂಗೆಯಲ್ಲಿ ಜನರು ಇರಲಿ, ದೇಶದ ಸಾಧು ಸಂತರೇ ಹೆದರುವ ಪರಿಸ್ಥಿತಿಯೇ ಬಂದಿದೆ.
ವಿಜಯ ದಶಮಿ ದಿನದಂದು ಸಾಧು ಸಂತರೇ ಗಂಗೆಯಲ್ಲಿ ಪುಣ್ಯ ಸ್ಥಾನ ಮಾಡಲು ನಿರಾಕರಿಸಿದ್ದಾರೆ. ಎಂಬ ಘಟನೆ ಮುಜಾಫರ್ ನಗರದಲ್ಲಿ ನಡೆದಿದೆ. ಸುಕಿರ್ತಲ್ ಎಂಬಲ್ಲಿ ಗಂಗಾನದಿಯ ನೀರು ಕಪ್ಪುಬಣ್ಣಕ್ಕೆ ತಿರುಗಿದೆ.
ಪಕ್ಕದ ಕಾರ್ಖಾನೆಗಳು ಮಲಿನ ನೀರು ನದಿಯ ನೀರನ್ನು ಸೇರಿ, ಅದು ಸಂಪೂರ್ಣ ಮಲಿನವಾಗಿದೆ. ಇಂತಹ ನೀರಿನಲ್ಲಿ ಸ್ನಾನ ಮಾಡುವುದಿಲ್ಲ ಎಂದು ಸಾಧುಗಳು ಹೇಳಿದ್ದಾರೆ. ಈ ಮಧ್ಯೆ ಗಂಗೆಯ ಒಂದು ಹನಿ ನೀರು ಇಲ್ಲಿಗೆ ವರೆಗೆ ಶುಧ್ಧೀಕರಣಗೊಂಡಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅಸಮಾಧಾನ ವ್ಯಕ್ತಪಡಿಸಿದೆ.
Comments