'ಸ್ವಾಭಿಮಾನ್' ಹೊಸ ಪಕ್ಷ ಕಟ್ಟಿದ ನಾರಾಯಣ್ ರಾಣೆ
ಮಹಾರಾಷ್ಟ್ರ: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರು ಮಹಾರಾಷ್ಟ್ರದಲ್ಲಿ ಸ್ವಾಭಿಮಾನ್ ಪಕ್ಷ ಎಂಬ ರಾಜಕೀಯ ಪಕ್ಷ ವೊಂದನ್ನು ಆರಂಭಿಸಿದ್ದಾರೆ.
ಮಹಾರಾಷ್ಟ್ರ ಸ್ವಾಭಿಮಾನ್ ಪಕ್ಷ ಎನ್ನುವ ಹೊಸ ಪಕ್ಷವೊಂದನ್ನು ಕಟ್ಟಿದ್ದು, ಪಕ್ಷದಲ್ಲಿ ಜನರ ಸೇರ್ಪಡೆಗಾಗಿ ನಿರೀಕ್ಷಿಸುತ್ತೇನೆ, ಬಳಿಕ ಭವಿಷ್ಯದ ನಡೆಗೆ ಯೋಚಿಸಲಿದ್ದೇನೆ ಎಂದು 65 ವರ್ಷದ ಬಲಿಷ್ಠ ರಾಜಕೀಯ ನಾಯಕ ರಾಣೆ ಅವರು ಇಲ್ಲಿ ಪತ್ರಿಕಾಗೋಷ್ಠಿಯೊಂದನ್ನು ಆಯೋಜಿಸಿ ಮಾತನಾಡಿದ್ದಾರೆ.
ಶೀರ್ಘವೇ ಹೊಸ ಪಕ್ಷ ನೊಂದಣಿ ಮಾಡಲಾಗುವುದು, ಒಂದು ವೇಳೆ ಎನ್ ಡಿಎ ಜತೆಗೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾಪ ಬಂದರೆ , ಪಕ್ಷವು ಅದರೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದರು. ಕಾಂಗ್ರೆಸ್ ನಲ್ಲಿ ಅಶೋಕ್ ಚವ್ಹಾಣ್ ಅವರನ್ನು ಹೊರೆತುಪಡಿಸಿ ಉಳಿದ ಎಲ್ಲಾ ನಾಯಕರು ನನಗೆ ಆಪ್ತರಾಗಿದ್ದಾರೆ, ಎಂಎನ್ ಎಸ್ ಕುರಿತು ಬಗ್ಗೆ ಮಾತನಾಡಿದ ಅವರು, ಅದು ಮಾಧ್ಯಮಗಳಿಂದಾಗಿ ಬದುಕುಳಿದಿರುವ ಪಕ್ಷವಾಗಿದೆ ಎಂದು ಅಣಕವಾಡಿದ್ದಾರೆ.
Comments