ರಾಜ್ಯದಲ್ಲಿ ಅತಿಹೆಚ್ಚು ಪೌಷ್ಟಿಕಾಂಶ ಸಮಸ್ಯೆ- ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ಸಮೀಕ್ಷೆಯಿಂದ ಬೆಳಕಿಗೆ

ನವದೆಹಲಿ: ರಕ್ತದಲ್ಲಿ ಅಧಿಕ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರಾಯ್ಡ್ ಮಟ್ಟ, ಧೂಮಪಾನ ಹಾಗೂ ಮದ್ಯಪಾನ ಕರ್ನಾಟಕ ನಗರ ಪ್ರದೇಶದ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ಸಮೀಕ್ಷೆಯೊಂದು ತಿಳಿಸಿದೆ.
ಕರ್ನಾಟಕ ನಗರ ಪ್ರದೇಶದ ಪುರುಷ ಮತ್ತು ಮಹಿಳೆಯರಲ್ಲಿ ಕೊಲೆಸ್ಟಾರಾಲ್ ಮಟ್ಟ ಇಡೀ ದೇಶದಲ್ಲೇ ಎರಡನೇ ಅತಿ ಹೆಚ್ಚಿನದಾಗಿದೆ ಎಂಬುದು ಹೈದ್ರಾಬಾದ್ ನ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಎನ್ ಐ ಎನ್ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಧೀನದ ಪ್ರಮುಖ ಸಂಸ್ಥೆಯಾಗಿದೆ.
ಕರ್ನಾಟಕ ನಗರ ಪ್ರದೇಶ ಪುರುಷ ಹಾಗೂ ಮಹಿಳೆಯರಲ್ಲಿ ಕೆಟ್ಟ ಮಟ್ಟದ ಟ್ರೈಗ್ಲಿಸರಾಯ್ಡ್ ಇದ್ದು, ಇದು ಹೃದಯದ ಸಮ,್ಯೆಸೇರಿದಂತೆ ಹಲವು ಸಮಸ್ಯೆ ಸೇರಿದಂತೆ ಹಲವು ಕಾಯಿಲೆಗಳು ಕಾರಣವಾಗಿವೆ. ನಗರ ಜೀವನ ಒತ್ತಡ ಮಕ್ಕಳ ಮೇಲು ಇದೆ.
ಕರ್ನಾಟಕದಲ್ಲಿ ನಗರ ಪ್ರದೇಶದ ಶೇ.97 ರಷ್ಟು ತಾಯಂದಿರು ಮಕ್ಕಳಿಗೆ ಆರು ತಿಂಗಳಿಗೊಮ್ಮೆ ಪೌಷ್ಟಿಕಾಂಶದ ಆಹಾರನೀಡ್ತಾರೆ. ಆರು ತಿಂಗಳಿಗೊಮ್ಮೆ ಕೇವಲ ತಾಯಿ ಎದೆಹಾಲನ್ನು ಮಾತ್ರ ನೀಡಬೇಕು ಎಂಬ ವೈದ್ಯರ ಸಲಹೆಯನ್ನು ತಾಯಂದಿರು ನಿರ್ಲಕ್ಷ ಮಾಡುತ್ತಾರೆ. ಇದು ಮಕ್ಕಳ ತೂಕ ಇಳಿಕೆ ಮತ್ತು ಅಪೌಷ್ಟಿಕತೆಗೆ ಕಾರಣವಾಗುತ್ತದೆ ಎನ್ನಲಾಗಿದೆ.
Comments