ಜ್ಯೂಸ್ ಎಂದು ಆ್ಯಸಿಡ್ ಕುಡಿದ ಇಬ್ಬರು ಬಾಲಕರ ಸಾವು

ಇಂದು ಸಾಯಿಲ್ ಶಂಕರ್ ಹುಟ್ಟು ಹಬ್ಬದ ಆಚರಣೆಯಿತ್ತು. ರಾತ್ರಿ ಮನೆಯಲ್ಲಿ ಕೇಕ್ ಕಟ್ ಮಾಡಲು ತಯಾರಿ ನಡೆಸಿದ್ದರು. ಸ್ನೇಹಿತ ಮಾನೀಶ್ ಸಂಜಯ್ ಸಿಂಗ್ ಸಂಭ್ರಮಾಚರಣೆಗೆ ಬಂದಿದ್ದರು. ಇಬ್ಬರು ಬಾಲಕರು ಜ್ಯೂಸ್ ಎಂದುಕೊಂದು ಸಲ್ಫ್ಯೂರಿಕ್ ಆ್ಯಸಿಡ್ ಕುಡಿದು ಮೃತಪಟ್ಟಿದ್ದಾರೆ.
ಜ್ಯೂಸ್ ಎಂದುಕೊಂಡು ಬಾಟಲ್‍ನಲ್ಲಿದ್ದ ಆ್ಯಸಿಡ್ ಕುಡಿದು ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಅವೆನ್ಯೂ ರಸ್ತೆ ಬಳಿಯಿರುವ ಕಿಲಾರೆ ರಸ್ತೆಯಲ್ಲಿ ನಡೆದಿದೆ. ಆ್ಯಸಿಡ್ ಕುಡಿದು ಆರ್ಯನ್ ಸಿಂಗ್(9) ಮತ್ತು ಸಾಯಿಲ್ ಶಂಕರ್(8) ಮೃತಪಟ್ಟಿದ್ದಾರೆ. ಆಭರಣ ಕರಗಿಸಲು ಸಲ್ಫ್ಯೂರಿಕ್ ಆ್ಯಸಿಡ್ ನ್ನು ಸಾಯಿಲ್ ಸಿಂಗ್ ತಂದೆ ಮನೆಗೆ ತಂದಿಟ್ಟಿದ್ದರು. ಅವರು ಚಿನ್ನ ಕರಗಿಸುವ ಕೆಲಸ ಮಾಡಿಕೊಂಡಿದ್ದರು. ಅದಕ್ಕಾಗಿ ಮನೆಯಲ್ಲಿ ಆ್ಯಸಿಡ್ ನನ್ನು ಕೂಲ್ ಡ್ರಿಂಕ್ಸ್ ಬಾಟಲ್‍ನಲ್ಲಿಟ್ಟರು. ಇಂದು ಸಾಯಿಲ್ ಶಂಕರ್ ಹುಟ್ಟು ಹಬ್ಬದ ಆಚರಣೆಯಿತ್ತು. ರಾತ್ರಿ ಮನೆಯಲ್ಲಿ ಕೇಕ್ ಕಟ್ ಮಾಡಲು ತಯಾರಿ ನಡೆಸಿದ್ದರು. ಸ್ನೇಹಿತ ಮಾನೀಶ್, ಸಂಜಯ್ ಸಿಂಗ್ ಸಂಭ್ರಮಾಚರಣೆಗೆ ಬಂದಿದ್ದರು. ಇಬ್ಬರು ಬಾಲಕರು ಜ್ಯೂಸ್ ಎಂದುಕೊಂದು ಸಲ್ಫ್ಯೂರಿಕ್ ಆ್ಯಸಿಡ್ ಕುಡಿಯುತ್ತಿದ್ದಂತೆ ಅಸ್ವಸ್ಥರಾದ್ದರು. ಅಸ್ವಸ್ಥಗೊಂಡಿದ್ದ ಬಾಲಕರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದ್ರೆ ಆಸ್ಪತ್ರೆಗೆ ದಾಖಲಿಸೋ ಮುನ್ನ ದಾರಿ ಮಧ್ಯದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ. ಈ ಸಂಬಂಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments