ಜಿಯೋ ಫೋನ್ ಖರೀದಿಸುವವರಿಗೆ ಕಂಪನಿಯಿಂದ ಹೊಸ ಷರತ್ತು

ಜಿಯೋ ಫೋನ್ ಖರೀದಿ ಮಾಡಿದ ಗ್ರಾಹಕರು ಒಂದು ವರ್ಷದಲ್ಲಿ 1500 ರೂಪಾಯಿ ರಿಚಾರ್ಜ್ ಮಾಡಲೇಬೇಕು. ಒಂದು ವೇಳೆ 1500 ರೂಪಾಯಿ ರಿಚಾರ್ಜ್ ಮಾಡದೆ ಹೋದಲ್ಲಿ ಅವ್ರ ಫೋನನ್ನು ಕಂಪನಿ ವಾಪಸ್ ಪಡೆಯಲಿದೆ. ಗ್ರಾಹಕರು ಮೂರು ವರ್ಷಕ್ಕೆ ಜಿಯೋ ಫೀಚರ್ ಫೋನ್ ವಾಪಸ್ ನೀಡ ಬಯಸಿದ್ರೆ ಮೂರು ವರ್ಷದಲ್ಲಿ 4500 ರೂಪಾಯಿ ರಿಚಾರ್ಜ್ ಮಾಡಿರಬೇಕು.
ಆಗ ಮಾತ್ರ ಗ್ರಾಹಕರಿಗೆ ಕಂಪನಿ 1500 ರೂಪಾಯಿ ವಾಪಸ್ ನೀಡಲಿದೆ.ಜಿಯೋ ಫೋನ್ ಗೆ ಸಂಬಂಧಿಸಿದಂತೆ ಮಹತ್ವದ ಷರತ್ತೊಂದನ್ನು ಕಂಪನಿ ವಿಧಿಸಿದೆ. ಫೋನ್ ಬಿಡುಗಡೆ ವೇಳೆ ಮುಖೇಶ್ ಅಂಬಾನಿ ಫೋನ್ ಸಂಪೂರ್ಣ ಉಚಿತವೆಂದಿದ್ದರು. ಭದ್ರತೆಗಾಗಿ 1500 ರೂಪಾಯಿಯನ್ನು ಗ್ರಾಹಕರು ನೀಡಬೇಕು. ಮೂರು ವರ್ಷದ ನಂತ್ರ ಅದು ವಾಪಸ್ ಸಿಗಲಿದೆ ಎಂದಿದ್ದರು. ಆದ್ರೀಗ ಜಿಯೋ ವೆಬ್ ಸೈಟ್ ನಲ್ಲಿ ಜಿಯೋ ಫೊನ್ ಬಗ್ಗೆ ವಿಶೇಷ ಮಾಹಿತಿ ನೀಡಲಾಗಿದೆ. ಒಂದು ವೇಳೆ ಗ್ರಾಹಕ ಒಂದು ವರ್ಷದಲ್ಲಿಯೇ ಫೋನ್ ವಾಪಸ್ ನೀಡಲು ಬಯಸಿದ್ರೆ 1500 ರೂಪಾಯಿ ಕಂಪನಿಗೆ ನೀಡಬೇಕು. ಜೊತೆಗೆ ಜಿಎಸ್ ಟಿ ಸೇರಿದಂತೆ ಕೆಲ ತೆರಿಗೆ ಮೊತ್ತ ನೀಡಬೇಕಾಗುತ್ತದೆ. ಎರಡು ವರ್ಷದೊಳಗಾಗಿ ಫೋನ್ ವಾಪಸ್ ಮಾಡ ಬಯಸಿದ್ರೆ ಗ್ರಾಹಕರು ಸಾವಿರ ರೂಪಾಯಿ ನೀಡಬೇಕಾಗುತ್ತದೆ. ಎರಡು ವರ್ಷದ ನಂತ್ರ ಫೋನ್ ವಾಪಸ್ ನೀಡ ಬಯಸುವ ಗ್ರಾಹಕರು 500 ರೂಪಾಯಿಯನ್ನು ಕಂಪನಿಗೆ ನೀಡಬೇಕೆಂದು ಕಂಪನಿ ಹೊಸ ಷರತ್ತು ವಿಧಿಸಿದೆ.
Comments