ಪ್ರೊಫೆಸರ್ ಭಗವಾನ್ ವಿವಾದಾತ್ಮಕ ಹೇಳಿಕೆ

26 Sep 2017 10:40 PM | General
376 Report

ಮೈಸೂರು : ಮೈಸೂರಿನ ಜಗನ್ಮೋಹನ್ ಅರಮನೆಯಲ್ಲಿ ನಡೆದ ವಿಶಿಷ್ಟ ಕವಿಗೋಷ್ಠಿಯಲ್ಲಿ ಪ್ರೊಫೆಸರ್ ಭಗವಾನ್ ಮತ್ತೊಂದು ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೈಸೂರು : ಮೈಸೂರಿನ ಜಗನ್ಮೋಹನ್ ಅರಮನೆಯಲ್ಲಿ ನಡೆದ ವಿಶಿಷ್ಟ ಕವಿಗೋಷ್ಠಿಯಲ್ಲಿ ಪ್ರೊಫೆಸರ್ ಭಗವಾನ್ ಮತ್ತೊಂದು ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಾಲ್ಮಿಕಿ ರಾಮಾಯಣದಲ್ಲಿ ಎಲ್ಲಿಯೂ ರಾಮ ದೇವರು ಅಂತಾ ಕರೆದಿಲ್ಲ ಎಂದು ತಿಳಿಸಿದ್ದಾರೆ.

ಬ್ರಾಹ್ಮಣರ ಮಾತು ಕೇಳಿ ಶಂಬುಕನ ತಲೆ ಕತ್ತರಿಸಿದ. ಬ್ರಾಹ್ಮಣರ ಮಾತು ಕೇಳಿ ತುಂಬು ಗರ್ಭಿಣಿ ಸೀತೆಯನ್ನು ಕಾಡಿಗೆ ಕಳುಹಿಸಿದ. ವಾಲ್ಮೀಕಿ ರಾಮಾಯಣದಲ್ಲಿ ರಾಮನ ನಿಜ ಸ್ವರೂಪ ತಿಳಿಯಲಿದೆ. ಹಾಗಾಗಿ ರಾಮ ಮಂದಿರ ಕಟ್ಟುವ ಮೊದಲು ಯೋಚಿಸಬೇಕು ಎಂದಿದ್ದಾರೆ. ಇಂತಹ ವ್ಯಕ್ತಿಯ ದೇವಾಲಯ ಕಟ್ಟಲು ಹೊರಟಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

 

 

 

 

Edited By

venki swamy

Reported By

Sudha Ujja

Comments