ಯಂಗ್’ ಆಗಿ ಕಂಡಿದ್ದೆ ತಪ್ಪಾಯಿತಾ ..?
ಇತ್ತೀಚೆಗೆ 41 ವರ್ಷದ ನಟಾಲಿಯಾ ವಯಸ್ಸಿನ ಮೇಲೆ ಅನುಮಾನಗೊಂಡ ಪೊಲೀಸರು ಆಕೆ ಬೇರೆ ಯಾರದ್ದೋ ಪಾಸ್‍ಪೋರ್ಟ್ ಬಳಸುತ್ತಿರಬಹುದೆಂದು ಸಂಶಯಗೊಂಡು ವಶಕ್ಕೆ ಪಡೆದಿದ್ರು. ನಟಾಲಿಯಾ ತನ್ನ ಪಾಸ್‍ಪೋರ್ಟ್‍ನಲ್ಲಿದ್ದ ಫೋಟೋಗಿಂತ ಸುಮಾರು 20 ವರ್ಷ ಚಿಕ್ಕವಳಿರಬಹುದು ಎಂದು ಅಧಿಕಾರಿಗಳು ನಂಬಿದ್ದರು.
ಏನು….ನಿಮಗೆ 40 ವರ್ಷ ವಯಸ್ಸಾ! ಹಂಗೆ ಕಾಣೋದೇ ಇಲ್ಲ. ತುಂಬಾ ಯಂಗ್ ಕಾಣ್ತೀರ ಅಂದ್ರೆ ಯಾವ ಮಹಿಳೆಯಾದ್ರೂ ನಾಚಿ ನೀರಾಗೋದ್ರಲ್ಲಿ ಡೌಟಿಲ್ಲ. ಆದ್ರೆ ಇದೇ ಕಾರಣಕ್ಕೆ ಮಹಿಳೆಯೊಬ್ರು ಫಜೀತಿಗೆ ಸಿಲುಕಿದ ಘಟನೆ ನಡೆದಿದೆ. ಇತ್ತೀಚೆಗೆ 41 ವರ್ಷದ ನಟಾಲಿಯಾ ಝೆಂಕಿವ್ ಟರ್ಕಿಯಿಂದ ತನ್ನ ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಪಾಸ್‍ಪೋರ್ಟ್ ಕಂಟ್ರೋಲ್‍ನಲ್ಲಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ. ಲಾಮಾ ಎಂದು ಕರೆಯಲ್ಪಡುವ ನಟಾಲಿಯಾ ಒಬ್ಬ ಗಾಯಕಿ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟಾಲಿಯಾ, ಅದು ಮಾಮೂಲಿ ವಿಚಾರಣೆಯಾಗಿರಲಿಲ್ಲ. ಈ ರೀತಿ ಆಗಿದ್ದು ನನಗೆ ಕಾಂಪ್ಲಿಮೆಂಟ್‍ನಂತಿತ್ತು. ನನ್ನನ್ನು ವಶಕ್ಕೆ ಪಡೆಯಲು ಕಾರಣ ಕೇಳಿದ ನಂತರ ನಗಲು ಶುರುಮಾಡಿದೆ. ನಾನು ನೋಡೋಕೆ ಹೇಗೆ ಕಾಣ್ತೀನಿ ಎಂಬ ಬಗ್ಗೆ ಸಾಕಷ್ಟು ಕಾಂಪ್ಲಿಮೆಂಟ್ಸ್ ಸಿಗ್ತಾನೆ ಇರುತ್ತೆ. ಆದ್ರೆ ಇದೇ ಕಾರಣದಿಂದ ನನ್ನನ್ನು ವಶಕ್ಕೆ ಪಡೆದು ವಿಚಾರಣೆ ಮಡ್ತಾರೆ ಅನ್ನೋದನ್ನ ಊಹಿಸಿರಲಿಲ್ಲ ಅಂತ ಹೇಳಿದ್ದಾರೆ.ಕೊನೆಗೆ ನಟಾಲಿಯಾ ಅಭಿಮಾನಿಗಳು ಆಕೆಯ ರಕ್ಷಣೆಗೆ ಬಂದಿದ್ದು ಅಧಿಕಾರಿಗಳು ಆಕೆಯನ್ನು ಬಿಟ್ಟು ಕಳಿಸಿದ್ದಾರೆ. ನಟಾಲಿಯಾರನ್ನ ಗುರುತು ಹಿಡಿದು ಕೆಲ ಅಭಿಮಾನಿಗಳು ಸೆಲ್ಫೀ ಹಾಗೂ ಆಟೋಗ್ರಾಫ್ ಕೇಳಿಕೊಂಡು ಆಕೆಯ ಬಳಿ ಬಂದಿದ್ರು.ಇನ್ನು ನಟಾಲಿಯಾ ಬ್ಯೂಟಿ ಸೀಕ್ರೆಟ್ ಬಹಿರಂಗಪಡಿಸಿದ ಅಭಿಮಾನಿಯೊಬ್ಬರು, ಆಕೆ ವೆಜಿಟೇರಿಯನ್. ಕೇವಲ ಹಣ್ಣು- ತರಕಾರಿಗಳನ್ನ ಮಾತ್ರ ತಿನ್ನುತ್ತಾರೆ. ಅದಕ್ಕೆ ಇಷ್ಟು ಚೆನ್ನಾಗಿ ಕಾಣ್ತಾರೆ ಅಂತ ಹೇಳಿದ್ದಾರೆ.
Comments