ಬಿಬಿಎಂಪಿ 3 ಅಥವಾ 5 ವಿಭಾಗ ಆಗಲಿದೆ : ಸಿಎಂ ಸಿದ್ದರಾಮಯ್ಯ

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕುರುಬರಹಳ್ಳಿ ವಾರ್ಡ್‌ನಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಯಾರೊಬ್ಬರೂ ಹಸಿವಿನಿಂದ ಬಳಲಬಾರದು. ಈ ಕಾರಣಕ್ಕಾಗಿಯೇ ಸರ್ಕಾರ ಇಂದಿರಾ ಕ್ಯಾಂಟೀನ್ ಅನ್ನು ಆರಂಭಿಸಿದೆ ಎಂದು ಹೇಳಿದರು.
ಬೆಂಗಳೂರು ವ್ಯಾಪ್ತಿಗೆ 110 ಹಳ್ಳಿಗಳನ್ನು ಸೇರಿಸಿರುವುದರಿಂದ ಬೃಹದಾಕಾರವಾಗಿ ಬೆಳೆದಿದೆ. ರಾಜಕಾಲುವೆ ಸಮಸ್ಯೆ, ಒಳಚರಂಡಿ ಸಮಸ್ಯೆ ಸೇರಿದಂತೆ, ವಿವಿಧ ಸಮಸ್ಯೆಗಳು ತಲೆದೋರಿವೆ. ಇವುಗಳನ್ನು ನಿಭಾಯಿಸಲು ಹಾಗೂ ಉತ್ತಮ ಆಡಳಿತ ನೀಡಲು ಒಂದೇ ಪಾಲಿಕೆಗೆ ಸಾಧ್ಯವಿಲ್ಲ. ಹೀಗಾಗಿ ಮಹಾನಗರ ಪಾಲಿಕೆಯನ್ನು 3 ಅಥವಾ 5 ವಿಭಾಗಗಳನ್ನಾಗಿ ವಿಭಾಗಿಸುವ ಉದ್ದೇಶವಿದೆ. ಆದರೆ ಇದಕ್ಕೂ ವಿರೋಧವಿದೆ. ಆಡಳಿತ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ವಿಂಗಡಣೆ ಅನಿವಾರ್ಯ. ಇದನ್ನು ಎಲ್ಲರೂ ಮನಗಾಣಬೇಕು ಎಂದು ಹೇಳಿದರು.
Comments