ಮೈಸೂರು ದಸರಾ : ಜಂಬೂ ಸವಾರಿಗೆ ನಾಲ್ಕೇ ದಿನ ಬಾಕಿ..

ಅರಮನೆ ಅಂಗಳದಲ್ಲಿ ಜಂಬೂ ಸವಾರಿಯ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅರ್ಜುನ ಸೇರಿದಂತೆ ಜಂಬೂ ಪಡೆಯ ಆನೆಗಳು ತಾಲೀಮಿನಲ್ಲಿ ಭಾಗಿಯಾಗಿದ್ದವು. ಇದರ ಜೊತೆಗೆ ಪೊಲೀಸ್ ಇಲಾಖೆಯ ವಿವಿಧ ತಂಡಗಳು ಹೆಜ್ಜೆ ಹಾಕಿದವು.
ವಿಶ್ವವಿಖ್ಯಾತ ನಾಡಹಬ್ಬದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ನಾಲ್ಕು ದಿನ ಮಾತ್ರ ಬಾಕಿಯಿದೆ. ಜಂಬೂ ಸವಾರಿಯ ಮೊದಲ ತಾಲೀಮಿಗೆ ಅಧಿಕಾರಿಗಳು ಪುಷ್ಪಾರ್ಚನೆ ಮೂಲಕ ಅರಮನೆ ಆವರಣದಲ್ಲಿ ಇಂದು ಚಾಲನೆ ನೀಡಿದರು. ಮುಖ್ಯಮಂತ್ರಿ ಪುಷ್ಪಾರ್ಚನೆ ಮಾಡುವ ತಾಲೀಮನ್ನ ಇಂದು ಪೊಲೀಸ್ ಅಧಿಕಾರಿಗಳು ಹಾಗೂ ಅರಣ್ಯ ಸಿಬ್ಬಂದಿ ಅಂಬಾರಿ ಹೊರುವ ಅರ್ಜುನ ಆನೆಗೆ ತಾಲೀಮು ನಡೆಸಿದರು.ಅಶ್ವಾರೋಹಿ ಪಡೆ ಸೇರಿ ವಿವಿಧ ಪಡೆಗಳ ತಾಲೀಮಿಗೆ ಲಯಬದ್ಧವಾಗಿ ಹೆಜ್ಜೆ ಹಾಕಿದವು. ವಿಶ್ವವಿಖ್ಯಾತ ಜಂಬೂ ಸವಾರಿಗೆ ಮೂರು ದಿನಗಳು ಮಾತ್ರ ಬಾಕಿ ಉಳಿದಿದ್ದು, ಈ ಹಿನ್ನೆಲೆ ಅರಮನೆಯಲ್ಲಿ ವೇದಿಕೆ ನಿರ್ಮಿಸಿ ತಾಲೀಮು ನಡೆಸಲಾಯ್ತು.
Comments