ಹೆಚ್.ಡಿ. ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ

26 Sep 2017 10:50 AM | General
403 Report

ಬೆಂಗಳೂರು: ಹೃದಯದ ಕವಾಟ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿ, ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಅಬ್ಸರ್ವೇಶನ್ ದೃಷ್ಟಿಯಿಂದ ಎರಡು ದಿನ ಐಸಿಯೂನಲ್ಲೇ ಇರಲಿದ್ದಾರೆ ಎಂದು ವೈದ್ಯ ಡಾ.ಸತ್ಯಕಿ ನಂಬಾಲ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆರಾಮವಾಗಿ ಮಾತನಾಡುತ್ತಾರೆ ಮತ್ತು ನಡೆದಾಡುತ್ತಾರೆ. ನಾಳೆಯೇ ಡಿಸ್ಚಾರ್ಜ್ ಮಾಡಿದರೂ ಸಮಸ್ಯೆ ಇಲ್ಲ. ಆದರೆ, ಕುಮಾರಸ್ವಾಮಿಯವರಿಗೆ ವಿಶ್ರಾಂತಿಯ ಅಗತ್ಯವಿದೆ. ಸೋಂಕು ತಗಲಬಾರದು. ಹೀಗಾಗಿ, ಆಸ್ಪತ್ರೆಯಲ್ಲೇ ಇರಿಸಿಕೊಂಡಿದ್ದೇವೆ.ಬಳಿಕ 15 ದಿನಗಳ ಕಾಲ ವಿಶ್ರಾಂತಿಯಲ್ಲಿರಲಿದ್ದಾರೆ.

 

Edited By

Shruthi G

Reported By

Shruthi G

Comments