ಬೆಂಗಳೂರು : ತಡ ರಾತ್ರಿಯಿಂದ ಬೆಳಗಿನವರೆಗೆ ವರುಣನ ಆರ್ಭಟ ಜೋರು

ತಡರಾತ್ರಿ 1.30ಕ್ಕೆ ಗುಡುಗು, ಮಿಂಚು ಸಹಿತ ಆರಂಭವಾದ ಮಳೆ ತಾಸುಗಟ್ಟಲೆ ಸುರಿಯಿತು. ಮಧ್ಯೆ ಮಧ್ಯೆ ತುಸು ಬಿಡುವು ನೀಡುತ್ತಾ ಬೆಳಿಗ್ಗೆ ವರೆಗೆ ಮಳೆ ಬೀಳುತ್ತಲೇ ಇತ್ತು. ಭಾರೀ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಹಲವೆಡೆ ಟ್ರಾಫಿಕ್ ಜಾಮ್,
ಬೆಳಿಗ್ಗೆ ಸಣ್ಣದಾಗಿ ಬೀಳುತ್ತಿದ್ದ ಮಳೆ 8ರ ಸುಮಾರಿಗೆ ಮತ್ತೆ ಹೆಚ್ಚಾಯಿತು. ಇದರಿಂದ ಕೋರಮಂಗಲ, ಬಿಟಿಎಂ ಲೇಔಟ್, ಮೆಜೆಸ್ಟಿಕ್ ಸುತ್ತಮುತ್ತ, ಸಿಲ್ಕ್ ಬೋರ್ಡ್, ಮೈಸೂರು ರಸ್ತೆ, ಬ್ಯಾಟರಾಯನಪುರ ಸೇರಿದಂತೆ ಹಲವೆಡೆ ಸಂಚಾರ ದಟ್ಟಣೆ ಹೆಚ್ಚಿತ್ತು. ಈಜಿಪುರದಲ್ಲಿ ಮಳೆ ನೀರಿನಿಂದಾಗಿ ಸೋನಿ ವರ್ಲ್ಡ್ ವೃತ್ತದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಅಣ್ಣಮ್ಮ ದೇಗುಲಕ್ಕೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಇಂದು ಮಧ್ಯಾಹ್ನ ಮತ್ತು ನಾಳೆ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನ ಅಥವಾ ರಾತ್ರಿ ಮಳೆ ಬೀಳಬಹುದು. ಇದು ಸದಾ ಜಿಟಿ ಜಿಟಿ ಮಳೆಯಲ್ಲ. ಸಂಜೆ ಅಥವಾ ರಾತ್ರಿ ಜೋರಾಗಿ ಮಳೆ ಬೀಳುತ್ತದೆ ಎಂದು ಇಲಾಖೆ ಹೇಳಿದೆ.ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು, ಗುಂಡಿಗಳಿರುವುದರಿಂದ ಎಚ್ಚರಿಕೆಯಿಂದ ವಾಹನ ಚಲಾಯಿಸಿ ಎಂದು ಸಂಚಾರ ಪೊಲೀಸ್ ಎಚ್ಚರಿಸಿದ್ದಾರೆ.
Comments