ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಬೃಹತ ಸಮಾವೇಶ, ಐದು ಲಕ್ಷಕ್ಕಿಂತ ಅಧಿಕ ಜನಸಾಗರ ಭಾಗಿ
ಕಲಬುರಗಿ: ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗೆ ಆಗ್ರಹಿಸಿ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಕಲಬುರಗಿಯಲ್ಲಿ ಲಿಂಗಾಯತ ಸಮನ್ವಯ ವೇದಿಕೆಯು ಈ ರ್ಯಾಲಿ ಆಯೋಜಿಸಿದೆ. ಗಂಜ್ ನಗರೇಶ್ವರ ಶಾಲೆಯಿಂದ ರ್ಯಾಲಿ ಆರಂಭಗೊಂಡಿದೆ.
ನಗರದ ಎನ್.ವಿ ಮೈದಾನದಲ್ಲಿ ಲಿಂಗಾಯತ ಸಮಾವೇಶ ನಡೆಯಲಿದೆ. ಸುಮಾರು 5 ಲಕ್ಷ ಜನರನನ್ನು ಸೇರಿಸಿದ್ದಾರೆ ಎಂದು ಲಿಂಗಾಯತ ಸಮನ್ವಯ ಸಮಿತಿ ತಿಳಿಸಿದೆ.ಲಿಂಗಾಯತ ಸ್ವತಂತ್ರ್ಯ ಧರ್ಮ ಮಾನ್ಯತೆಗಾಗಿ ಹಮ್ಮಿಕೊಂಡಿರುವ ಲಿಂಗಾಯತ ರ್ಯಾಲಿಗೆ ಮುಸ್ಲಿಂಮರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಯಾದಗಿರಿಯ ಜಮೀಯತೆ ಅಹ್ಲೇ ಹದೀಸ್ ಸಂಘಟನೆಯಿಂದ ಬಸವಾಭಿಮಾನಿಗಳಿಗೆ ಕುಡಿಯುವ ನೀರಿನ ವ್ಯವಸ್ಶೆ ಮಾಡಲಾಗಿದೆ. ಲಿಂಗಾಯತ ಸಮಾವೇಶದಲ್ಲಿ 100ಕ್ಕೂ ಅಧಿಕ ಮಠಾಧೀಶರು, ಸ್ವಾಮೀಜಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದಾರೆ.
Comments