ಪಾನಿಪುರಿಯನ್ನು ಹೀಗೆಲ್ಲಾ ತಿನ್ನಬಹುದಾ...
ಪಾನಿಪುರಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ಚಿಕ್ಕವರಿಂದ ದೊಡ್ಡವರು ಇಷ್ಟ ಪಡತ್ತಾರೆ. ಒಂದು ಪ್ಲೇಟ್ ಪಾನಿ ಪುರಿ ತಿಂದು ಮುಗಿಸಲು 5 ನಿಮಿಷ ಬೇಕು. ಇಲ್ಲೊಬ್ಳು ಮಹಿಳೆ ಪಾನಿಪುರಿ ತಿನ್ನೋ ಸ್ಟೈಲ್ ನೋಡಿದ್ರೆ ನೀವು ಬೆಕ್ಕಸ ಬೆರಗಾಗೋದು ಗ್ಯಾರಂಟಿ.
ಪಾನಿಪುರಿ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರೂರುತ್ತೆ. ಗರಿಗರಿಯಾದ ಪೂರಿಯಲ್ಲಿ ಆಲೂಗಡ್ಡೆ ಮಿಕ್ಸ್, ಪಾನಿ, ಸ್ವೀಟ್ ಮಿಕ್ಸ್ ಮಾಡಿಕೊಂಡು ತಿಂತಾ ಇದ್ರೆ ಅದೇ ಸ್ವರ್ಗ. ಸಾಮಾನ್ಯವಾಗಿ ನಾವೆಲ್ಲ ಪೂರಿಯೊಳಗೆ ಪಾನಿ ಹಾಕಿಕೊಂಡು ತಿನ್ನುತ್ತೇವೆ. ಹಾಗೆ ಮಾಡಿದ್ರೆ ಒಂದು ಪ್ಲೇಟ್ ಪಾನಿ ಪುರಿ ತಿಂದು ಮುಗಿಸಲು 5 ನಿಮಿಷ ಬೇಕು. ಇಲ್ಲೊಬ್ಳು ಮಹಿಳೆ ಪಾನಿಪುರಿ ತಿನ್ನೋ ಸ್ಟೈಲ್ ನೋಡಿದ್ರೆ ನೀವು ಬೆಕ್ಕಸ ಬೆರಗಾಗೋದು ಗ್ಯಾರಂಟಿ. ಪಾನಿಪುರಿ ತಿನ್ನೋ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪುರುಷರು ಮಹಿಳೆಯರೆನ್ನದೆ ತಿಂಡಿಪೋತರೆಲ್ಲ ಈ ಚಾಲೆಂಜ್ ನಲ್ಲಿ ಪಾಲ್ಗೊಂಡಿದ್ದಾರೆ.
ಆದ್ರೆ ಎಲ್ಲರ ಗಮನ ಸೆಳೆದವರು ಮಾತ್ರ ಈ ಮಹಿಳೆ. ಕೆಲವೇ ಕ್ಷಣಗಳಲ್ಲಿ ಪೂರಿಯನ್ನೆಲ್ಲ ಪ್ಲೇಟ್ ನಲ್ಲಿ ಮಿಕ್ಸ್ ಮಾಡಿಕೊಂಡು ಗಬಗಬನೆ ತಿಂದು, ಪಾನಿ ಕುಡಿದು ಮುಗಿಸಿಯೇಬಿಟ್ಟಿದ್ದಾಳೆ ಈಕೆ. ಪೂರಿ ಜೊತೆಗೆ ಆಕೆ ಪಾನಿ ಹಾಕಿಕೊಂಡು ತಿಂದಿಲ್ಲ. ಪೂರಿಯನ್ನೆಲ್ಲ ಸ್ವಾಹಾ ಮಾಡಿ ನಂತರ ಲೋಟದಲ್ಲಿ ಪಾನಿ ಹೀರಿದ್ದಾಳೆ.
ಈ ವಿಡಿಯೋ ವೈರಲ್ ಆಗಿದ್ದು, 2 ಮಿಲಿಯನ್ ಜನರು ಇದನ್ನು ವೀಕ್ಷಿಸಿದ್ದಾರೆ. ರಾಶಿ ರಾಶಿ ಕಮೆಂಟ್ ಗಳು ಕೂಡ ಬಂದಿವೆ. ಕೆಲವರು ಶಹಬ್ಬಾಸ್ ಅಂದ್ರೆ, ಇನ್ನು ಕೆಲವರು ಈ ರೀತಿ ತಿಂದ್ರೆ ಪಾನಿಪುರಿ ಟೇಸ್ಟೇ ಹೊರಟುಹೋಗುತ್ತೆ ಅಂತಾ ಬೇಜಾರ್ ಮಾಡ್ಕೊಂಡಿದ್ದಾರೆ.
Comments