ಬೆಕ್ಕು ನ್ನು ಕಾಪಾಡಲು ಹೋಗಿ ತಾನೇ ಸಂಕಷ್ಟಕ್ಕೆ ಸಿಲುಕಿದ ಬಾಲಕ

ಪಟ್ಟಣದ ಮುಖ್ಯರಸ್ತೆಯಲ್ಲಿ ಪಾಳು ಬಿದ್ದ ಬಾವಿಗೆ ಬೆಕ್ಕೊಂದು ಬಿದ್ದಿದ್ದು, ಅದನ್ನು ರಕ್ಷಿಸಲೆಂದು 15 ವರ್ಷದ ಬಾಲಕ ತನ್ನ ಜೀವದ ಹಂಗು ತೊರೆದು ಬಾವಿಗೆ ಇಳಿದು ಬೆಕ್ಕನ್ನು ರಕ್ಷಿಸಿದ್ದಾನೆ. ಆದರೆ ಬೆಕ್ಕಿನೊಂದಿಗೆ ಮೇಲಕ್ಕೆ ಬರಲು ಸಾಧ್ಯವಾಗಿದೆ ಸಂಕಷ್ಟದಲ್ಲಿ ಸಿಲುಕಿದ್ದಾನೆ.
ಬಾಲಕನೊಬ್ಬ ತನ್ನ ಜೀವವನ್ನೇ ಪಣಕ್ಕಿಟ್ಟು ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ತಾನೇ ಸಂಕಷ್ಟಕ್ಕೆ ಸಿಲುಕಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ. ಬಾವಿಯಲ್ಲಿದ್ದ ಬಾಲಕನನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬಾಲಕ ಹಾಗೂ ಬೆಕ್ಕನ್ನು ಏಣಿ ಮೂಲಕ ಮೇಲೆತ್ತಿದ್ದಾರೆ. ಮೇಲೆತ್ತಿದ್ದ ಕೂಡಲೇ ಬಾಲಕ ಭಯಗೊಂಡು ಹೆಸರು ವಿಳಾಸ ಹೇಳದೇ ಸ್ಥಳದಿಂದ ಓಡಿಹೋಗಿದ್ದಾನೆ. ಸುಮಾರು 80 ಅಡಿಗಳ ಬಾವಿ ಇದಾಗಿದ್ದು ಸ್ವಲ್ಪವೇ ನೀರಿತ್ತು. ಬೆಕ್ಕನ್ನು ರಕ್ಷಿಸಿದ ಬಾಲಕನ ಮಾನವೀಯತೆಯನ್ನು ಕಂಡ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Comments