BSNL ನಿಂದ ಮತ್ತೊಂದು ಭರ್ಜರಿ ಆಫರ್…!!
ನವದೆಹಲಿ: ಜಿಯೋ ಬಂದಿದ್ದೇ ಬಂದಿದ್ದು, ಮೊಬೈಲ್ ಸೇವಾ ಕಂಪನಿಗಳ ನಡುವೆ ಪೈಪೋಟಿ ಹೆಚ್ಚಾಗಿಬಿಟ್ಟಿದೆ. ಖಾಸಗಿ ಕಂಪನಿಗಳೊಂದಿಗಿನ ಸ್ಪರ್ಧೆಯಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿ.ಎಸ್.ಎನ್.ಎಲ್.) ಕೂಡ ಭರ್ಜರಿ ಆಫರ್ ಘೋಷಿಸಿದೆ.
429 ರೂ.ಗೆ 90 ಜಿ.ಬಿ. ಡೇಟಾ ಹಾಗೂ ಅನ್ ಲಿಮಿಟೆಡ್ ಕಾಲ್, 249 ರೂಪಾಯಿಗೆ 28 ಜಿ.ಬಿ. ಡೇಟಾ ಅನ್ ಲಿಮಿಟೆಡ್ ಕಾಲ್ ಸೌಲಭ್ಯ ನೀಡಲಾಗುವುದು.ವಿಶೇಷ ಟ್ಯಾರಿಫ್ ವೋಚರ್ ಪ್ಲಾನ್ ನಲ್ಲಿ 249 ರೂ.ಗೆ ಪ್ರತಿದಿನ 10 ಜಿ.ಬಿ. ಡೇಟಾವನ್ನು 28 ದಿನಗಳ ಕಾಲ ನೀಡಲಾಗುವುದು. ಇದರೊಂದಿಗೆ ಇನ್ನೂ ಹಲವು ಪ್ಲಾನ್ ಗಳನ್ನು ಬಿ.ಎಸ್.ಎನ್.ಎಲ್. ಪರಿಚಯಿಸಿದೆ.
Comments