ಕತ್ತರಿಸಿದ ಕೈ ಕಂಡು ರೋಡ್ ಬಂದ್ ಮಾಡಿದ ಪೊಲೀಸರು, ಆದ್ರೆ ಕೈ ಸ್ಟೋರಿಯಲ್ಲಿದೆ ಟ್ವಿಸ್ಟ್
ಕತ್ತರಿಸಿದ ಕೈ ನೋಡಿದ ಪೊಲೀಸರು ಮುಖ್ಯರಸ್ತೆಯನ್ನೇ ಕ್ಲೋಸ್ ಮಾಡಿದ ಘಟನೆ ಇಂಗ್ಲೆಂಡಿನಲ್ಲಿ ನಡೆದಿದೆ. ಆದ್ರೆ ಆ ಕೈ ಹಿಂದಿನ ಗೌಪ್ಯ ಬಯಲಾದ ನಂತರ ಪೊಲೀಸರು ಅಯ್ಯೋ ಇಷ್ಟೇನಾ ಅಂತಿದ್ದಾರೆ. ಏನಪ್ಪಾ ಅಂತೀರಾ ...
ಡ್ರೈವರ್‍ವೊಬ್ಬರು ರಸ್ತೆಯಲ್ಲಿ ಕತ್ತರಿಸಿ ರಕ್ತಸಿಕ್ತವಾಗಿ ಬಿದ್ದಿದ್ದ ಕೈ ತುಂಡನ್ನು ನೋಡಿದ್ದರು. ಈ ಹಿನ್ನೆಲೆಯಲ್ಲಿ ಕ್ಲೆವಿಲ್ಯಾಂಡ್ ಮತ್ತು ಡರ್ಹಮ್ ರೋಡ್ ಪೊಲೀಸರು ಮಿಡಲ್‍ಬ್ರೋ ಬಳಿಯ ಎ19 ರಸ್ತೆಯನ್ನ ಬಂದ್ ಮಾಡಿದ್ದರು. ಆದ್ರೆ ಕೆಲವೇ ಸಮಯದಲ್ಲಿ ಆ ಕತ್ತರಿಸಿ ಬಿದ್ದಿದ ಕೈ ತುಂಡು ಫೇಕ್ ಎಂದು ಅಧಿಕಾರಿಗಳಿಗೆ ಗೊತ್ತಾಗಿದೆ. ಅದು ರಬ್ಬರ್‍ನಿಂದ ಮಾಡಿದ ಕೈ ಎಂದು ಗೊತ್ತಾದ ನಂತರ ರಸ್ತೆಯನ್ನ ಮತ್ತೆ ತೆರೆದಿದ್ದಾರೆ. ಮುಖ್ಯರಸ್ತೆಯನ್ನು ಬಂದ್ ಮಾಡಿದ್ದರ ಬಗ್ಗೆ ಪೊಲೀಸರು ಫೇಸ್‍ಬುಕ್‍ನಲ್ಲಿ ವಿವರಣೆ ನೀಡಿದ್ದಾರೆ. ವಾಹನ ಸವಾರರೊಬ್ಬರು ಅನುಮಾನಾಸ್ಪದ ವಸ್ತುವೊಂದನ್ನ ನೋಡಿದ್ದರು. ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿದ್ದು, ಅದೊಂದು ಕೃತಕ ಕೈ ಎಂದು ಗೊತ್ತಗಿದೆ. ಯಾವುದೇ ಗೊಂದಲ ಬೇಡ ಎಂದು ಹೇಳಿದ್ದಾರೆ.
Comments