ಅಸ್ಸಾಂನ ಉಕ್ಕಿನ ಮಹಿಳೆ ಸಂಜುಕ್ತಾ ಪರಾಶರ್
ಸಂಜುಕ್ತಾ ಎಕೆ-47 ರೈಫಲ್ ಹೊತ್ತು ಇವರು ಕಾರ್ಯಾಚರಣೆಗೆ ಇಳಿದರೆ ಉಗ್ರರು ಖತಂ ಖಚಿತ. ಇವರು ಉಗ್ರಗಾಮಿಗಳು ಮತ್ತು ನಟೋರಿಯಸ್ ಕ್ರಿಮಿನಲ್‍ಗಳ ಎದೆಯಲ್ಲಿ ನಡುಕ ಹುಟ್ಟಿಸಿ, ಉಗ್ರಗಾಮಿಗಳಿಗೆ ಸಿಂಹಸ್ವಪ್ನವಾಗಿರುವ ವೀರನಾರಿಯೊಬ್ಬರ ಶೌರ್ಯ-ಸಾಹಸ ಮೆಚ್ಚುವಂಥದ್ದು.
ಕಳೆದ ವರ್ಷಗಳಿಂದ ಬೋಡೋ ಉಗ್ರರ ನಿಗ್ರಹ ಕಾರ್ಯಾಚರಣೆಗಳಿಗಾಗಿ ತಮ್ಮ ಸೇವೆಯನ್ನು ಮೀಸಲಿಟ್ಟಿದ್ದಾರೆ.ಸಂಜುಕ್ತಾ ಪರಾಶರ್ ಭಾರತದ ಅತ್ಯಂತ ಧೈರ್ಯಶಾಲಿ ಐಪಿಎಸ್ ಅಧಿಕಾರಿ ಹಾಗೂ ಅಸ್ಸಾಂನ ಪ್ರಥಮ ಐಪಿಎಸ್ ಅಧಿಕಾರಿ ಎಂಬ ಹೆಮ್ಮೆ ಇವರದು. ಅಸ್ಸಾಂನ ಉಕ್ಕಿನ ಮಹಿಳೆ ಎಂದೇ ಗುರುತಿಸಿಕೊಂಡಿದ್ದಾರೆ. ಇವರು ಕೇವಲ 15 ತಿಂಗಳ ಕ್ಷಿಪ್ರ ಕಾರ್ಯಾಚರಣೆಯಲ್ಲಿ 16 ಭಯೋತ್ಪಾದಕರನ್ನು ಕೊಂದು, 64 ಉಗ್ರರು ಮತ್ತು ಕುಖ್ಯಾತ ಕ್ರಿಮಿನಲ್‍ಗಳನ್ನು ಬಂಧಿಸಿದ್ದಾರೆ. ಬಾಲ್ಯದಿಂದಲೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಆಸೆಯನ್ನಿಟ್ಟುಕೊಂಡಿದ್ದರು. ಇವರು ಗೃಹಿಣಿ, ನಾಲ್ಕು ವರ್ಷದ ಮುದ್ದಾದ ಮಗುವಿದೆ. ಆದರೆ ಎರಡು ತಿಂಗಳಲ್ಲಿ ಒಮ್ಮೆ ಮಾತ್ರ ತಮ್ಮ ಕುಟುಂಬದೊಂದಿಗೆ ಕೆಲಕಾಲ ಕಳೆಯುತ್ತಾರೆ. ಈ ವೀರನಾರಿಗೆ ಭಯೋತ್ಪಾದಕರ ಸಂಘಟನೆಗಳಿಂದ ಪ್ರಾಣ ಬೆದರಿಕೆ ಕರೆಗಳೂ ಬಂದಿವೆ. ಆದರೆ ಈ ನಿರ್ಭೀತ ಅಧಿಕಾರಿಗೆ ಭಯವೆಂಬುದೇ ಗೊತ್ತಿಲ್ಲ. ಭಯೋತ್ಪಾದನೆ ವಿರುದ್ಧ ಸಮರಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಇಂಥ ವೀರಾಗ್ರಣಿಯರ ಅಗತ್ಯ ಇಂದು ನಮ್ಮ ದೇಶಕ್ಕೆ ಅಗತ್ಯವಿದೆ.
Comments