ಪಬ್ ಪ್ರವೇಶಿಸುವವರಿಗೆ ಆಧಾರ್ ಕಡ್ಡಾಯ..!!
ಹೊಸದಿಲ್ಲಿ : ಹೈದರಾಬಾದಿನಲ್ಲಿ ಮುಂದಿನ ಬಾರಿ ನೀವು ಪಬ್‌ಗೆ ಹೋಗುವಾಗ ನಿಮ್ಮ ಆಧಾರ್ ಕಾರ್ಡ್ ತೋರಿಸುವುದಕ್ಕೆ ಸಿದ್ಧರಾಗಿರಿ.
ಇಂಡಿಯಾ ಟುಟೇ ವರದಿಯ ಪ್ರಕಾರ ತೆಲಂಗಾಣದ ಮದ್ಯ ನಿಷೇಧ ಮತ್ತು ಅಬಕಾರಿ ಇಲಾಖೆ "ಪಬ್ ಭೇಟಿ ನೀಡುವವರು ತಮ್ಮ ಗುರುತು ಚೀಟಿಯನ್ನು, ಮುಖ್ಯವಾಗಿ ಆಧಾರ್ ಕಾರ್ಡ್ ತೋರಿಸಿ ಪ್ರವೇಶಿಸುವುದನ್ನು ಕಡ್ಡಾಯ ಮಾಡಿದೆ'.
ಈಚೆಗೆ 17 ವರ್ಷ ಬಾಲಕಿಯೋರ್ವಳ ಕೊಲೆ ನಡೆದುದನ್ನು ಅನುಸರಿಸಿ ಪಬ್‌ನಲ್ಲಿ ಎಲ್ಲ ಗಿರಾಕಿಗಳು ತಮ್ಮ ಆಧಾರ್ ಕಾರ್ಡ್ ತೋರಿಸಿಯೇ ಒಳಪ್ರವೇಶಿಸುವುದನ್ನು ಕಡ್ಡಾಯ ಮಾಡುವ ಕ್ರಮವನ್ನು ತೆಲಂಗಾಣ ಸರಕಾರ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಕೊಲೆಗೀಡಾದ ಈ ಬಾಲಕಿ ಇತರ ಅಪ್ರಾಪ್ತ ವಯಸ್ಸಿನ ಹುಡುಗರೊಂದಿಗೆ ನಗರದ ಪಬ್ ನಲ್ಲಿ ಮದ್ಯ ಪೂರೈಕೆ ಮಾಡುತ್ತಿರುವದನ್ನು ಪೊಲೀಸರು ಗಮನಿಸಿದ್ದರು. ತೆಲಂಗಾಣ ಸರಕಾರ ಎಲ್ಲ ಪಬ್ ಮತ್ತು ಬಾರ್ ಮ್ಯಾನೇಜರ್‌ಗಳಿಗೆ ತಮ್ಮ ಗಿರಾಕಿಗಳ ವಿವರಗಳನ್ನು ಪ್ರತ್ಯೇಕ ರಿಜಿಸ್ಟರ್ ನಲ್ಲಿ ದಾಖಲಿಸುವಂತೆ ಆದೇಶಿಸಿದೆ.
Comments