ಜಿಯೋ ಹೆಚ್ಚು ಡೇಟಾ ಪಡೆಯುವುದು ಹೇಗೆ?
ಜಿಯೋ ಡೇಟಾ ಬೂಸ್ಟರ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದ್ದು, ನಿಮ್ಮ ಅವಶ್ಯಕತೆಗೆ ತಕ್ಕಂತೆ ನೀವು ರಿಚಾರ್ಜ್ ಮಾಡಿಸಿಕೊಂಡು ಹೆಚ್ಚಿನ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ವಿವಿಧ ಶ್ರೇಣಿಯ ದರಗಳನ್ನು ಜಿಯೋ ನಿಗದಿ ಮಾಡಿದೆ.
ಜಿಯೋ ಬಳಕೆದಾರರಿಗೆ ರಿಲಯನ್ಸ್ ಜಿಯೋ ನೀಡುತ್ತಿರುವ ಡೇಟಾ ಸಾಲುತ್ತಿಲ್ಲ. ದಿನಕ್ಕೆ ಒಂದು GB ಸಹ ಕಡಿಮೆ ಎನ್ನುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಡೇಟಾ ಸಾಲುತ್ತಿಲ್ಲ ಎನ್ನುವವರಿಗಾಗಿಯೇ ಜಿಯೋ ಹೊಸದೊಂದು ಪ್ಲಾನ್ ಅನ್ನು ಬಿಡುಗಡೆ ಮಾಡಿದೆ.
ಅವುಗಳ ಬಗ್ಗೆ ಮಾಹಿತಿ ಮುಂದಿನಂತಿದೆ.
ಜಿಯೋ ಬೂಸ್ಟರ್ ಪ್ಯಾಕ್ ಎಂದೂ ಕರೆಯಲಾಗುವ ಈ ಆಡ್-ಆನ್ ಪ್ಯಾಕ್‌ನಲ್ಲಿ 35 ನಿಮಿಷಗಳ ಉಚಿತ ಕರೆಗಳೊಂದಿಗೆ 4G ವೇಗದಲ್ಲಿ 100 MB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.
ಜಿಯೋ ರೂ. 51 ಪ್ಯಾಕ್‌ನಲ್ಲಿ 1 GB 4G ಡೇಟಾ ಮತ್ತು 175 ನಿಮಿಷಗಳ ಉಚಿತ ಕರೆ ಗಳನ್ನು ನೀಡುತ್ತದೆ.
ಈ ಬೂಸ್ಟರ್ ಪ್ಯಾಕ್ 4G ಸ್ಪೀಡ್‌ನಲ್ಲಿ 2GB ಡೇಟಾವನ್ನು ಹಾಗೂ 325 ನಿಮಿಷಗಳ ಉಚಿತ ಕರೆ ಗಳನ್ನು ನೀಡುತ್ತದೆ.
ರೂ. 201 ಬೂಸ್ಟರ್ ಪ್ಯಾಕ್ 5 GB 4G ಡೇಟಾ ಮತ್ತು 725 ನಿಮಿಷಗಳ ಉಚಿತ ಕರೆ ಗಳನ್ನು ಪಡೆಯಬಹುದಾಗಿದೆ.
ರೂ.301 ಪ್ಯಾಕ್ ನಲ್ಲಿ 10 GB ಡೇಟಾವನ್ನು 1,000 ನಿಮಿಷಗಳ ಉಚಿತ ಕರೆ ಗಳನ್ನು ನೀಡಲಾಗುವುದು
Comments