ರಾಮ್ ರಹೀಂ -ಹನಿಪ್ರೀತ್ ರಹಸ್ಯ ಬಿಚ್ಚಿಟ್ಟ ರಾಖಿ ಸಾವಂತ್!!

ಸಾಧ್ವಿಗಳಿಬ್ಬರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂ ಸಿಂಗ್ ಜೈಲು ಸೇರಿದ್ದಾನೆ.
ಆತನ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ತಲೆ ಮರೆಸಿಕೊಂಡಿದ್ದು, ಇವರಿಬ್ಬರ ಸಂಬಂಧದ ಕುರಿತಾಗಿ ಹಲವು ಸುದ್ದಿಗಳು ಹರಿದಾಡಿವೆ. ಇನ್ನು ಡೇರಾದಲ್ಲಿ ಶೋಧ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಹಲವು ಬೆಚ್ಚಿ ಬೀಳಿಸುವ ಸಂಗತಿ ಬೆಳಕಿಗೆ ಬಂದಿವೆ.
ಇದೀಗ ಬಹುಭಾಷಾ ನಟಿ ರಾಖಿ ಸಾವಂತ್, ಬಾಬಾನ ಬಣ್ಣವನ್ನು ಬಯಲು ಮಾಡಿದ್ದಾಳೆ. ಬಾಬಾನ ಬೆಡ್ ರೂಂನಲ್ಲಿ ವಯಾಗ್ರ ಇತ್ತು. ಹನಿಪ್ರೀತ್ ಸಿಂಗ್ ಮತ್ತು ಗುರ್ಮಿತ್ ತಂದೆ -ಮಗಳೆಂದು ಹೇಳಿಕೊಂಡಿದ್ದರೂ, ಅವರ ವರ್ತನೆ ಆ ರೀತಿ ಇರಲಿಲ್ಲ. ಬೇರೆಯದೇ ರೀತಿಯಲ್ಲಿತ್ತು ಎಂದು ಹೇಳಿದ್ದಾಳೆ.
ರಾಖಿಯ ಸಹೋದರ ರಾಕೇಶ್ ಸಾವಂತ್ ನಿರ್ದೇಶನದಲ್ಲಿ ರಾಮ್ ರಹೀಂ ಕುರಿತಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಇದರಲ್ಲಿ ರಾಖಿ ಸಾವಂತ್, ಹನಿಪ್ರೀತ್ ಸಿಂಗ್ ಪಾತ್ರ ಮಾಡುತ್ತಿದ್ದಾಳೆ.ಈಗಾಗಲೇ ಐಟಂ ಸಾಂಗ್ ವೊಂದರ ಚಿತ್ರೀಕರಣವೂ ನಡೆದಿದೆ. ಸಿನಿಮಾದಲ್ಲಿ ಬಾಬಾನ ಬಣ್ಣ ಬಯಲು ಮಾಡುವುದಾಗಿ ರಾಖಿ ಹೇಳಿದ್ದಾಳೆ.
ಸಿರ್ಸಾದ ಡೇರಾ ಆಶ್ರಮದಲ್ಲಿ ಬಾಬಾನ ರಹಸ್ಯ ಕೋಣೆಗೆ ಭೇಟಿ ನೀಡಿದ್ದಾಗ, ವಯಾಗ್ರ ಕಂಡಿತ್ತು. ಅಲ್ಲೇ ಅಮಾಯಕ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದ್ದುದನ್ನು ತಿಳಿದು ಆಘಾತವಾಗಿತ್ತು.
Comments