ನವ ಭಾರತ ರೂಪಿಸಬಲ್ಲ ನಾಯಕ ಮೋದಿ - ರತನ್ ಟಾಟಾ ವಿಶ್ವಾಸ

ನವದೆಹಲಿ: ಪ್ರಧಾನಿ ಮೋದಿ ನವಭಾರತ ರೂಪಿಸಬಲ್ಲರು, ಮೋದಿ ಅವರಿಗೆ ಭಾರತವನ್ನು ರೂಪಾಂತರಿಸುವ ಅವಕಾಶ ನೀಡಬೇಕು, ಏಕೆಂದರೆ ಅವರು ನವಭಾರತ ನಿರ್ಮಾಣದ ದೃಷ್ಟಾರತೆಯನ್ನು ಹೊಂದಿದ್ದಾರೆ ಎಂದು ಟಾಟಾ ಸನ್ಸ್ ಸಮೂಹದ ಅಧ್ಯಕ್ಷ ರತನ್ ಟಾಟಾ ಹೇಳಿದ್ದಾರೆ.
ಸಿಎನ್ ಬಿಸಿ ಟಿವಿ 18 ವಾಣಿಜ್ಯ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಮಾತನ್ನು ಹೇಳಿದ್ದು, ಪ್ರಧಾನಿ ಮೋದಿ ಅತ್ಯಂತ ತ್ವರಿತ ಗತಿಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಪ್ರಶಂಸಿದ ಅವರು, ಮೋದಿ ಗುಜುರಾತ್ ಸಿಎಂ ಆಗಿದ್ದಾಗ ನಾನು ಅವರ ಕಾರ್ಯ ವೈಖರಿ, ಆಡಳಿತ ದಕ್ಷತೆಯನ್ನು ಗಮನಿಸಿಕೊಂಡು ಬರುತ್ತಿದ್ದೇನೆ ಎಂದರು.
ಪ್ರಧಾನಿ ಮೋದಿ ಅವರು ಭಾರತಕ್ಕೆ ಮತ್ತು ಭಾರತದ ಜನರಿಗೆ ನವಭಾರತದ ಕೊಡುಗೆ ನೀಡುವುದಾಗಿ ಹೇಳಿದ್ದಾರೆ. ಆದುದರಿಂದ ನಾವು ಅವರಿಗೆ ಅದಕ್ಕಾಗಿ ಅವಕಾಶ ನೀಡಬೇಕು. ಮೋದಿ ಭಾರತವನ್ನು ಹೊಸದಾಗಿ ಕಾಣುವ ಸಾಮರ್ಥ್ಯ ಮತ್ತು ನವೋನತೆಯನ್ನು ಹೊಂದಿದ್ದಾರೆ ಎಂಬ ವಿಶ್ವಾಸ ಹಾಗೂ ಆಶಾವಾದವನ್ನು ನಾನು ಹೊಂದಿದ್ದೇನೆ ಎಂದು ರತನ್ ಟಾಟಾ ಹೇಳಿದರು. ಇದೇ ವೇಳೆ ಟಾಟಾ ನ್ಯಾನೋ ಕಾರ್ ಫ್ಯಾಕ್ಟರಿಯನ್ನು ಪಶ್ಚಿಮ ಬಂಗಾಳ ಗುಜುರಾತ್ ಗೆ ಸ್ಥಳಾಂತರಿಸುವುದಕ್ಕೆ ಕೇವಲ ಮೂರು ದಿನದಲ್ಲೇ ಅಗತ್ಯವಿದ್ದ ಭೂಮಿಯನ್ನು ನೀಡಿ ನೆರವಾದ ಮೋದಿಯನ್ನು ರತನ್ ಟಾಟಾ ಕೃತಜ್ಞತೆಯಿಂದ ಸ್ಮರಿಸಿದರು.
Comments