ಮೆಕ್ಸಿಕೊದಲ್ಲಿ ಭೂಕಂಪ : 139 ಮಂದಿ ಸಾವು

20 Sep 2017 11:02 AM | General
339 Report

ಮೆಕ್ಸಿಕೊ ಸಿಟಿಯಲ್ಲಿ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 139 ಮಂದಿ ಸಾವಿಗೀಡಾಗಿದ್ದಾರೆ. ಬಹುಮಹಡಿ ಕಟ್ಟಡಗಳು ನೆಲಸಮವಾಗಿವೆ. ಜನರು ರಸ್ತೆಯಲ್ಲಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ .

ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಭೂಕಂಪ ಇಲ್ಲಿ ಉಂಟಾಗಿದ್ದು, ಬಹುಮಹಡಿ ಕಟ್ಟಡಗಳು ನೆಲಸಮವಾಗಿವೆ. ಇನ್ನು ಕೆಲವು ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಹೆಚ್ಚಿನ ಕಟ್ಟಡಗಳ ನಡುವೆ ಜನರು ಸಿಲುಕಿಕೊಂಡಿದ್ದಾರೆ. ಭೂಕಂಪನದ ಅನುಭವವಾದೊಡನೆ ಜನರು ಕಚೇರಿ, ಮನೆಯಿಂದ ಹೊರ ಬಂದು ಬೀದಿಯಲ್ಲಿ ಓಡಾಡುವ ದೃಶ್ಯಗಳು ಕಂಡು ಬಂತು.

Courtesy: prajavani

Comments