ಕೇಂದ್ರ ಸರ್ಕಾರಿ ನೌಕರರಿಗೆ ಪಿಂಚಣಿ ಕುರಿತ ಸರ್ಕಾರಿ ಆಪ್
ನಾಳೆ ಈ ಆಪ್ ಬಿಡುಗಡೆಯಾಗಲಿದ್ದು, ಪಿಂಚಣಿ ಲೆಕ್ಕಾಚಾರಗಳನ್ನು ತಿಳಿಯುವುದರೊಂದಿಗೆ ತಮ್ಮ ಯಾವುದೇ ದೂರುದುಮ್ಮಾನಗಳನ್ನು ಸರ್ಕಾರಕ್ಕೆ ತಿಳಿಸಲು ಅನುಕೂಲವಿರುವ ಈ ನೂತನ ಆಪ್ ನಿವೃತ್ತರಾಗಲಿರುವ ಕೇಂದ್ರ ಸರಕಾರಿ ನೌಕರರಿಗೆ ತುಂಬಾ ಪ್ರಯೋಜನಕಾರಿಯಾಗಬಲ್ಲುದು ಎಂದು ಪೆನ್ಶನ್ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ನಿವೃತ್ತಿ ಹೊಂದಲಿರುವ ಕೇಂದ್ರ ಸರ್ಕಾರಿ ನೌಕರರಿಗಾಗಿ ತಮ್ಮ ಪೆನ್ಶನ್ ಮತ್ತಿತರ ವಿಲೇವಾರಿ ಕುರಿತ ವಿಷಯಗಳ ತಾಜಾ ಮಾಹಿತಿಗಳನ್ನು ಬೆರಳ ತುದಿಯಲ್ಲೇ ಪಡೆಯಲು ಅನುಕೂಲ ಮಾಡಿಕೊಡುವ ಆಪ್ ಒಂದನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ. ಪಿಂಚಣಿ ಕುರಿತಾದ ಸಂಪೂರ್ಣ ಮಾಹಿತಿ ಈ appನಲ್ಲಿ ಅಡಕವಾಗಿರುತ್ತದೆ. ಪಿಂಚಣಿ ಲೆಕ್ಕಾಚಾರಗಳನ್ನು ತಿಳಿಯುವುದರೊಂದಿಗೆ ತಮ್ಮ ಯಾವುದೇ ದೂರುದುಮ್ಮಾನಗಳನ್ನು ಸರ್ಕಾರಕ್ಕೆ ತಿಳಿಸಲು ಅನುಕೂಲವಿರುವ ಈ ನೂತನ ಆಪ್, ನಿವೃತ್ತರಾಗಲಿರುವ ಕೇಂದ್ರ ಸರಕಾರಿ ನೌಕರರಿಗೆ ತುಂಬಾ ಪ್ರಯೋಜನಕಾರಿಯಾಗಬಲ್ಲುದು ಎಂದು ಪೆನ್ಶನ್ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಸಚಿವಾಲಯ ಈಗಾಗಲೇ ಪಿಂಚಣಿದಾರರಿಗಾಗಿ ಒಂದು ಪೋರ್ಟಲ್ ಹೊಂದಿದ್ದು, ಪೋರ್ಟಲ್ ನಲ್ಲಿ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಮೊಬೈಲ್ ಆಪ್ ನಲ್ಲಿ ಒದಗಿಸುವ ಯೋಜನೆ ಹೊಂದಿದೆ. ಸಿಬ್ಬಂದಿ, ಸಾರ್ವಜನಿಕ ದೂರುಗಳು ಮತ್ತು ಪೆನ್ಶನ್ ಖಾತೆಯ ಕೇಂದ್ರ ಸಹಾಯಕ ಸಚಿವ ಜೀತೇಂದ್ರ ಸಿಂಗ್ ಅವರು ಈ ನೂತನ ಆಪ್ ನ್ನು ನಾಳೆ ಬಿಡುಗಡೆ ಮಾಡಲಿದ್ದಾರೆ. ಈ ಆಪ್ ನಿವೃತ್ತರಾಗಲಿರುವ ಕೇಂದ್ರ ಸರ್ಕಾರದ ಸುಮಾರು 300ಕ್ಕೂ ಅಧಿಕ ನೌಕರರಿಗೆ ಪ್ರಯೋಜನವಾಗಲಿದೆ.
Comments