ರೈಲ್ವೆ ಇಲಾಖೆ : 1 ಲಕ್ಷಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ

ಸುದೀರ್ಘ ಕಾಲದಿಂದ ರೈಲ್ವೆ ಇಲಾಖೆ ಹುದ್ದೆಗಳು ಖಾಲಿ ಇದ್ದು, ಈಗ ಅವನ್ನೆಲ್ಲ ಭರ್ತಿ ಮಾಡಲು ನಿರ್ಧರಿಸಿದೆ. ದಿನೇ ದಿನೇ ರೈಲು ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದು ಕೂಡ ಇದಕ್ಕೆ ಪ್ರಮುಖ ಕಾರಣ. ಸಿಬ್ಬಂದಿ ಕೊರತೆಯಿಂದಾಗಿ ರೈಲ್ವೆ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ ಅನ್ನೋ ಆರೋಪ ಕೂಡ ಕೇಳಿ ಬಂದಿದೆ.
ರೈಲ್ವೆ ಇಲಾಖೆಯ ಸುರಕ್ಷತಾ ವಿಭಾಗದಲ್ಲಿ ಖಾಲಿ ಇರುವ 1 ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಲೋಕೋ ರನ್ನಿಂಗ್ ಸಿಬ್ಬಂದಿ, ಡ್ರೈವರ್, ಸ್ಟೇಶನ್ ಮಾಸ್ಟರ್, ಗಾರ್ಡ್, ಟೆಕ್ನಾಲಜಿ ಸೂಪರ್ ವೈಸರ್, ಕಂಟ್ರೋಲ್ & ಯಾರ್ಡ್ ಸ್ಟಾಫ್, ಸಿಗ್ನಲ್ ಇನ್ಸ್ ಪೆಕ್ಟರ್ ಮತ್ತು ನಿರ್ವಹಣಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಸದ್ಯ ರೈಲ್ವೆ ಸುರಕ್ಷತೆಗೆ ಸಂಬಂಧಪಟ್ಟ ವಿಭಾಗದಲ್ಲಿ 7 ಲಕ್ಷ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಅಂತಾ ರೈಲ್ವೆ ಇಲಾಖೆ ಸಂಸತ್ತಿಗೆ ಮಾಹಿತಿ ನೀಡಿದೆ. ರೈಲ್ವೆ ಬೋರ್ಡ್ ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಅಶ್ವನಿ ಲೋಹಾನಿ, ಸುರಕ್ಷತೆಗೆ ಹೆಚ್ಚು ಒತ್ತು ನೀಡುವುದಾಗಿ ಹೇಳಿದ್ದಾರೆ.
Comments