ಕೆಪಿಸಿಎಲ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು : ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ವಿವಿಧ ಕೇಂದ್ರಗಳಲ್ಲಿ ಖಾಲಿ ಇರುವ 79 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
70 ಅಪರೇಟಿವ್ ಹಾಗೂ 9 ಸಹಾಯ ಅಪರೇಟಿವ್ ಹುದ್ದೆಗಳಿಗೆ ಆನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನಿಗದಿತ ದಿನಾಂಕ 21 ಅಕ್ಟೋಬರ್ 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
- ಹುದ್ದೆ: ಅಪರೇಟಿವ್ (70)
- ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿರಬೇಕು. ಹಾಗೂ ಲೈಸನ್ಸ್ ಹೊಂದಿರಬೇಕು ಜತೆಗೆ ಭಾರಿ ವಾಹನ ಚಾಲನೆಯಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.
- ವೇತನ ಶ್ರೇಣಿ: 9540 ರಿಂದ 27455 ರು. ತಿಂಗಳಿಗೆ.
- ವಯೋಮಿತಿ: ಅಕ್ಟೋಬರ್ 21, 2017ಕ್ಕೆ ಅನ್ವಯವಾಗುವಂತೆ 18ರಿಂದ 35 ವರ್ಷದೊಳಗಿರಬೇಕು.
- ಸಹಾಯ ಅಪರೇಟಿವ್ ಹುದ್ದೆ(9)
- ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿರಬೇಕು. ಹಾಗೂ ಲೈಸನ್ಸ್ ಹೊಂದಿರಬೇಕು ಜತೆಗೆ ಭಾರಿ ವಾಹನ ಚಾಲನೆಯಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.
- ವೇತನ ಶ್ರೇಣಿ: 8390 ರಿಂದ 22845 ರು. ತಿಂಗಳಿಗೆ.
- ವಯೋಮಿತಿ: ಅಕ್ಟೋಬರ್ 21, 2017ಕ್ಕೆ ಅನ್ವಯವಾಗುವಂತೆ 18ರಿಂದ 35 ವರ್ಷದೊಳಗಿರಬೇಕು.
- ಆಯ್ಕೆ ವಿಧಾನ: ಮೇಲಿನ ಎರಡು ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.
Comments