ನಾನು ಕರ್ನಾಟಕವನ್ನು ಹಿಂದೂ ರಾಜ್ಯವನ್ನಾಗಲು ಬಿಡುವುದಿಲ್ಲ : ಎಚ್.ಡಿ.ದೇವೇಗೌಡ

ಶಹಾಪುರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ ದೇವೇಗೌಡರು ,ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಹಗಲುಗನಸು ಕಾಣುತ್ತಿದ್ದಾರೆ ಮೋದಿ ,ಕರ್ನಾಟಕ ಹಿಂದೂ ರಾಜ್ಯ ಆಗಲು ಬಿಡಲ್ಲ ಎಂದು ಹೇಳಿದರು.
ಮಂಗಳೂರಿನಲ್ಲಿ ಕ್ರೈಸ್ತರು ಮತ್ತು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕು ಇದೆ. ಅಲ್ಲಿ ಕೋಮು ಭಾವನೆ ಕೆರಳಿಸಿ ಸಾಮರಸ್ಯ ಜೀವನಕ್ಕೆ ಧಕ್ಕೆ ತಂದಿರುವುದು ಸರಿಯಲ್ಲ. ಕೋಮು ಗಲಭೆ ಹತ್ತಿಕ್ಕುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿದರು.ಶಹಾಪುರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಾರವಾರದ ಬೆಂಕಿಯುಂಡೆಯನ್ನು ಕೇಂದ್ರದ ಸಚಿವರನ್ನಾಗಿ ಮಾಡಿ ಕಳುಹಿಸಿರುವೆ ಎಂಬ ಬಿಜೆಪಿ ಮುಖಂಡರ ಕುಹಕದ ಮಾತುಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೇಳಿದರು.
Comments