ಜನರು ಬಯಲು ಶೌಚ ಮಾಡುವುದನ್ನು ಕ್ಲಿಕ್ಕಿಸಿ...,100 ರೂ.ಬಹುಮಾನ ಪಡೆಯಿರಿ

ಬಯಲು ಶೌಚವನ್ನು ನಿಲ್ಲಿಸುವ ಕಾರ್ಯದಲ್ಲಿ ನಾಗರಿಕರನ್ನು ತೊಡಗಿಸಿಕೊಳ್ಳುವ ಅಭಿಯಾನವಾಗಿದೆ. ಯಾರಾದರೂ ಬಯಲು ಶೌಚ ವಿಸರ್ಜನೆ ಮಾಡುತ್ತಿದ್ದರೆ ಅಂತಹವರ ಚಿತ್ರವನ್ನು ಕ್ಲಿಕ್ಕಿಸಿ ರವಾನೆದಾರನ ಹೆಸರು ಮತ್ತು ವಿಳಾಸ ಸಹಿತ ವಾಟ್ಸಾಪ್ ಮೂಲಕ ನಿಗದಿತ ಮೊಬೈಲ್ ಸಂಖ್ಯೆಗೆ ಕಳುಹಿಸುವಂತೆ ಜಿಲ್ಲಾಡಳಿತದ ನೂತನ ಯೋಜನೆಯಲ್ಲಿ ತಿಳಿಸಲಾಗಿದೆ. ಬಯಲು ಶೌಚ ಮಾಡಿದ ವ್ಯಕ್ತಿಗೆ ಅಧಿಕಾರಿಗಳು 250 ರೂ.ದಂಡ ವಿಧಿಸುತ್ತಾರೆ ಮತ್ತು ಈ ಪೈಕಿ 100 ರೂ.ಗಳನ್ನು ಚಿತ್ರವನ್ನು ಕ್ಲಿಕ್ಕಿಸಿದ ವ್ಯಕ್ತಿಗೆ ನೀಡುತ್ತಾರೆ.
ಬಯಲು ಶೌಚ ಮುಕ್ತ ಪ್ರದೇಶಕ್ಕೆ ಗ್ವಾಲಿಯರ್ ಸರ್ಕಾರದ ಹೊಸ ಹೊಸ ತಂತ್ರ ,ಮಾರ್ಚ್ ನಲ್ಲಿ ಗ್ವಾಲಿಯರ್(ಗ್ರಾಮೀಣ)ನ್ನು ಬಯಲು ಶೌಚ ಮುಕ್ತ ಪ್ರದೇಶವೆಂದು ಘೋಷಿಸಲಾಗಿತ್ತು, ಆದರೆ ಈಗಲೂ ನಮಗೆ ಬಯಲು ಶೌಚದ ದೂರುಗಳು ಬರುತ್ತಲೇ ಇವೆ ಎಂದು ಜಿಲ್ಲಾ ಪಂಚಾಯತ್ ನ ಸಿಇಒ ನೀರಜ ಸಿಂಗ್ ತಿಳಿಸಿದರು. ಇಂತಹ ಚಿತ್ರವನ್ನು ಜಿಲ್ಲಾ ಪಂಚಾಯತ್ನ ನಿಗಾ ಅಧಿಕಾರಿಗಳು ಮತ್ತು ಪಂಚಾಯತ್ ಕಾರ್ಯದರ್ಶಿಗೆ ಕಳುಹಿಸಲಾಗುವುದು. ಆದರೆ ಅದು ವೈರಲ್ ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ಆದರೆ ಈ ಅಭಿಯಾನಕ್ಕೆ ಕೆಲವು ಅಧಿಕಾರಿಗಳು ಮತ್ತು ಸಾಮಾಜಿಕ ಕಾರ್ಯಕರ್ತ ರಿಂದ ಆಕ್ಷೇಪಗಳು ವ್ಯಕ್ತವಾಗಿವೆ. ಇದರಿಂದ ಜನರು ಅವಹೇಳನಕ್ಕೆ ಗುರಿಯಾಗುತ್ತಾರೆ ಮತ್ತು ಅವರ ಪ್ರತಿಷ್ಠೆಗೆ ಹಾನಿಯಾಗುವುದರಿಂದ ಕಾನೂನು ತೊಂದರೆಗಳೂ ಎದುರಾಗಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಬಯಲು ಶೌಚದಲ್ಲಿ ತೊಡಗಿದ್ದವರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಗಳಲ್ಲಿ ಪೋಸ್ಟ್ ಮಾಡಿ ಅವರ ಮಾನವನ್ನು ಕಳೆದಿದ್ದಕ್ಕಾಗಿ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಮೇವಾತ್ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಿತ್ತು.
Comments