ಪಾಕಿಸ್ತಾನ : ಕ್ರಿಕೆಟ್ ಪ್ರೇಮಿ ಕ್ಷೌರಿಕನ ವಿಶಿಷ್ಟ ಆಫರ್
ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮ್ಯಾಚ್ ನಡೆಯುತ್ತಿದೆ. ಲಾಹೋರ್ ನ ಗಡಾಫಿ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಟಿಕೆಟ್ ಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇದಕ್ಕಾಗಿಯೇ ಬಹವಲ್ಪುರದ ಕ್ಷೌರಿಕನೊಬ್ಬ ವಿಶಿಷ್ಟ ಆಫರ್ ಕೂಡ ನೀಡಿದ್ದಾನೆ. ಯಾರು ಅವನಿಗೆ ಕ್ರಿಕೆಟ್ ಪಂದ್ಯದ ಟಿಕೆಟ್ ತಂದುಕೊಡ್ತಾರೋ, ಅವರಿಗೆ ಒಂದು ವರ್ಷ ಉಚಿತವಾಗಿ ಹೇರ್ ಕಟ್ ಮಾಡೋದಾಗಿ ತಿಳಿಸಿದ್ದಾನೆ.
ಪಾಕಿಸ್ತಾನ ಕೊನೆಗೂ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರ ಆತಿಥ್ಯ ವಹಿಸ್ತಾ ಇದೆ. ವರ್ಲ್ಡ್ ಇಲವೆನ್ ಹಾಗೂ ಪಾಕಿಸ್ತಾನದ ಮಧ್ಯೆ 3 ಟಿ-20 ಪಂದ್ಯಗಳ ಸರಣಿ ನಡೆಯಲಿದೆ. 2009ರ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮ್ಯಾಚ್ ನಡೆಯುತ್ತಿದೆ.ಹಾಗಾಗಿ ಪಂದ್ಯ ವೀಕ್ಷಿಸಲು ಅಲ್ಲಿನ ಅಭಿಮಾನಿಗಳು ಕಾತರದಿಂದಿದ್ದಾರೆ. ಪಾಕಿಸ್ತಾನದ ಪತ್ರಕರ್ತನೊಬ್ಬ ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾನೆ. ಈ ಟ್ವೀಟ್ ವೈರಲ್ ಆಗಿದೆ.
Comments