ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡೋಕೆ ಮೋದಿ ಪ್ಲಾನ್ ಏನು ಗೊತ್ತಾ!?

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ವಾಹನ ಸವಾರರು ಕಂಗೆಟ್ಟಿದ್ದು, ಇದೀಗ 'ಒಂದು ದೇಶ, ಒಂದೇ ತೆರಿಗೆ' ಎಂಬ ನಿಟ್ಟಿನಲ್ಲಿ ಜಾರಿಗೊಂಡರೆ ಪೆಟ್ರೋಲ್, ಡೀಸೆಲ್ ಬೆಲೆ ಅರ್ಧಕ್ಕೆ ಅರ್ಧ ಕಡಿಮೆ ಆಗಲಿದೆ.
ಹೌದು, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅಗ್ಗವಾಗಲಿದೆ. ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗಲು ಇದೊಂದೇ ದಾರಿ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸಲಹೆ ನೀಡಿದ್ದಾರೆ.
ಅಂತೆಯೇ ಧರ್ಮೇಂದ್ರ ಪ್ರಧಾನ್ ನೀಡಿರುವ ಸಲಹೆ ಬಗ್ಗೆ ವಿತ್ತ ಸಚಿವ ಅರುಣ್ ಜೈಟ್ಲಿಯ ನೇತೃತ್ವದ ಜಿಎಸ್‌ಟಿ ಮಂಡಳಿ ಗಮನ ಹರಿಸಬೇಕೆಂಬ ಚರ್ಚೆ ಈಗ ನಡೆಯುತ್ತಿದೆ.
ಒಂದು ವೇಳೆ ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್ ಡೀಸೆಲ್ ಬಂದರೆ, ಅದರ ಬೆಲೆಯಲ್ಲಿ ಅರ್ಧ ಕಡಿಮೆ ಆಗಲಿದೆ ಅಂತೆ. ಅಂದರೆ, 70 ರೂಪಾಯಿನಿಂದ 38 ರೂಪಾಯಿಗೆ ಪೆಟ್ರೋಲ್ ದರ ಕುಸಿತವಾಗಲಿದೆ ಎನ್ನಲಾಗುತ್ತಿದೆ. ಸದ್ಯ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 70 ರೂಪಾಯಿದೆ. ಒಂದು ವೇಳೆ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್ ಬಂದರೆ, ಪೆಟ್ರೋಲ್‌ಗೆ ಶೇ.12ರಷ್ಟು ಜಿಎಸ್‌ಟಿ ಅನ್ವಯವಾಗಲಿದ್ದು, ಇದರಿಂದ 38 ರೂಪಾಯಿಗೆ ಪೆಟ್ರೋಲ್ ಬೆಲೆ ಕುಸಿತವಾಗಲಿದೆ. ಇನ್ನು ಡೀಸೆಲ್ ಶೇ.28ರಷ್ಟು ಜಿಎಸ್‌ಟಿಯೊಂದಿಗೆ 9 ರಿಂದ 10 ರೂಪಾಯಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಲೆಕ್ಕಾಚಾರ ಮಾಡಲಾಗಿದೆ.
Comments