ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡಬೇಕಿಲ್ಲ. ಭಾರತ ದೇಶಕ್ಕೆ ಅವರೇ ರತ್ನ - ಜಗ್ಗೇಶ್
ಸಿದ್ದಗಂಗಾ ಶ್ರೀಗಳಿಗೆ ಯಾರು ಭಾರತರತ್ನ ಕೊಡಬೇಕಿಲ್ಲ. ಭಾರತ ದೇಶಕ್ಕೆ ಅವರೆ ರತ್ನ ಎಂದು ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಮಧ್ಯೆ ನಟ ಜಗ್ಗೇಶ್ ಹೇಳಿಕೆ ನೀಡಿದ್ದು, ಯಾರು ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಬೇಕಿಲ್ಲ, ಅವರೇ ರತ್ನ ವಿದ್ದಂತೆ, ಸಿದ್ದಗಂಗಾ ಶ್ರೀಗಳಂತಹ ಮಹನೀಯರನ್ನ ಪಡೆದ ನಾವೇ ಧನ್ಯ. ಅವರನ್ನ ಅವಮಾನಿಸೋದು ಒಂದೆ ಶಿವನನ್ನ ಅವಮಾನೀಸೋದು ಒಂದೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಸಿದ್ದಗಂಗಾ ಶ್ರೀಗಳು ಲಿಂಗಾಯತ ಧರ್ಮಕ್ಕೆ ಸಮ್ಮತಿ ಸೂಚಿಸಿದ್ದರು ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ನೀಡಿದ್ದರು. ಬಳಿಕ ಮಠದಿಂದಲೇ ಪತ್ರಿಕಾ ಹೇಳಿಕೆ ಬಿಡುಗಡೆಯಾಗಿತ್ತು. ಸಚಿವರು ನಮ್ಮ ಹೇಳಿಕೆ ತಿರುಚಿದ್ದಾರೆಂದು ಉಲ್ಲೇಖಿಸಿದ್ದರಿಂದ ಸಚಿವರು ಭಾರೀ ಮುಜುಗರಕ್ಕೀಡಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಾತೆ ಮಹಾದೇವಿ, ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಆಮಿಷವೊಡ್ಡಿ ಮಾತು ಬದಲಿಸಲಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಹೇಳಿಕೆ ಕುರಿತಂತೆ ಮಾತೆ ಮಹಾದೇವಿ ವಿರುದ್ಧ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ.
Comments