ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನದ ಆಮಿಷ ಒಡ್ಡಲಾಗಿದೆ- ಮಾತೆ ಮಹಾದೇವಿ ಆರೋಪ

ಬಾಗಲಕೋಟೆ: ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನದ ಆರೋಪ ಒಡ್ಡಲಾಗಿದೆ ಎಂದು ಮಾತೆ ಮಹಾದೇವಿ ಆರೋಪ ಮಾಡಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ತಮ್ಮ ಬೆಂಬಲವಿದೆ ಎಂಬ ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಅವರ ಹೇಳಿಕೆಯನ್ನು ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ತಳ್ಳಿ ಹಾಕಿದ್ದಾರೆ.
ಬಾಗಲಕೋಟೆ: ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನದ ಆರೋಪ ಒಡ್ಡಲಾಗಿದೆ ಎಂದು ಮಾತೆ ಮಹಾದೇವಿ ಆರೋಪ ಮಾಡಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ತಮ್ಮ ಬೆಂಬಲವಿದೆ ಎಂಬ ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಅವರ ಹೇಳಿಕೆಯನ್ನು ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ತಳ್ಳಿ ಹಾಕಿದ್ದಾರೆ. ಏತನ್ಮಧ್ಯೆ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಆಮಿಷವೊಡ್ಡುವ ಮೂಲಕ ಹೇಳಿಕೆಯನ್ನು ಬದಲಾಯಿಸಿದ್ದಾರೆ ಎಂದು ಮಾತೆ ಮಹಾದೇವಿ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಮಾತೆ ಮಹಾದೇವಿ ಅವರು, ಸಿದ್ಧಗಂಗಾ ಶ್ರೀಗಳಿಗೆ ಈಗ ನೆನಪಿನ ಶಕ್ತಿ ಉಳಿಯುತ್ತಿಲ್ಲ, ಬೇಲಿ ಮಠದ ಶ್ರೀಗಳನ್ನು ನೀವು ಯಾರು ಎಂದು ಕೇಳಿದ್ದರು. ಇದನ್ನೇ ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿಸುವ ಆಮಿಷವೊಡ್ಡಿದ್ದಾರೆ ಎಂಬ ಬಗ್ಗೆ ಮಾಹಿತಿ ಬಂದಿದ್ದು, ಬಿಎಸ್ ವೈ ಹಾಗೂ ಸೋಮಣ್ಣ ಶ್ರೀಗಳಿಗೆ ಆಮಿಷ ವೊಡ್ಡಿರುವುದಾಗಿ ದೂರಿದರು. ಶೀರ್ಘದಲ್ಲೇ ನಾವಿದ್ದನ್ನು ಸಾಬೀತು ಮಾಡುತ್ತೇವೆ, ಭಾರತ ರತ್ನಕ್ಕಾಗಿ ಶ್ರೀಗಳು ಹೀಗೆ ಮಾತು ತಿರುಗಿಸಬಾರದು ಎಂದರು.
Comments