ಡಿ.ಕೆ.ಶಿವಕುಮಾರ್ಗೆ ಮತ್ತಷ್ಟು ಸಂಕಷ್ಟ ,ED ಗೆ ಪ್ರಕರಣ !!
ಐಟಿ ದಾಳಿಯ ನಂತರ ಡಿ.ಕೆ.ಶಿವಕುಮಾರ್ಗೆ ಇ.ಡಿ ಸಂಕಷ್ಟ ಶುರುವಾಗಿದೆ, ಸುಮಾರು 71 ಸ್ಥಳಗಳಲ್ಲಿ ದಾಳಿಮಾಡಿ ಡಿಕೆಶಿವಕುಮಾರ್ಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ವಶಪಡಿಸಿ ಕೊಂಡಿತ್ತು ವಿಚಾರಣೆ ನಡೆಸಿರುವ ಐಟಿ ಈ ಪ್ರಕರಣವನ್ನು ಇಡಿಗೆ ವಹಿಸಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ನಿನ್ನೆ ಡಿ.ಕೆ.ಶಿವಕುಮಾರ್ಗೆ ಕರೆ ಮಾಡಿರುವ ಇ.ಡಿ ಅಧಿಕಾರಿಗಳು ಅವರ ಮನೆಯ ವಿಳಾಸವನ್ನು ಪಡೆದುಕೊಂಡು ನೋಟೀಸ್ ನೀಡಲು ಮುಂದಾಗಿದ್ದಾರೆ. ಇ.ಡಿ ಮುಂದೆ ಇವರು ಸರಿಯಾಗಿ ವಿವರಣೆ ನೀಡದಿದ್ದಲ್ಲಿ ಇವರ ವಿರುದ್ದ ಎಫ್ಐಆರ್ ದಾಖಲಾಗುವ ಸಂಭವವಿದೆ. ಈಗೇನಾದರು ಎಫ್ಐಆರ್ ದಾಖಲಾದರೆ ಜೈಲಿಗೆಹೋಗಲೇ ಬೇಕಾಗುತ್ತದೆ. ಜೈಲಿಗೆ ಹೋದರೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗುತ್ತದೆ ಆದ್ದರಿಂದಾಗಿ ಡಿ.ಕೆ.ಶಿವಕುಮಾರ್ರವರಿಗೆ ಇದೊಂದು ತಲೆನೋವಾಗಿದ್ದು ಮುಂದೇನು ಎಂಬ ಪ್ರಶ್ನೆ ಮೂಡಿದೆ.
Comments