ಬೆಂಗಳೂರಿನಲ್ಲಿ 16 ಮಂದಿ ಚಿಂತಕರಿಗೆ ಪೊಲೀಸ್ ಭದ್ರತೆ

ಬೆಂಗಳೂರು : ಗೌರಿ ಲಂಕೇಶ್ ಹತ್ಯೆ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ, ಬೆದರಿಕೆ ಬರಬಹುದು ಎಂಬ ಕಾರಣಕ್ಕೆ ಗಿರೀಶ್ ಕಾರ್ನಾಡ್, ಬರಗೂರು ರಾಮಚಂದ್ರಪ್ಪ , ಚಿದಾನಂದಮೂರ್ತಿ ಸೇರಿದಂತೆ 16 ಮಂದಿ ಗಣ್ಯರಿಗೆ ಬೆಂಗಳೂರಿನಲ್ಲಿ ಭದ್ರತೆ ನೀಡಲಾಗಿದೆ. ಕೆಲವರಿಗೆ ಮನೆಯ ಕಾವಲಿಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಕೆಲವು ಗಣ್ಯರಿಗೆ ಅಂಗರಕ್ಷಕರನ್ನು ಒದಗಿಸಲಾಗಿದೆ. ಇದರಲ್ಲಿ ನಿಡುಮಾಮಿಡಿ ಸ್ವಾಮೀಜಿಗೆ ಮೂರು ಮಂದಿ ಅಂಗರಕ್ಷಕರನ್ನು ನೀ
ಹೆಸರು ಯಾವ ಭದ್ರತೆ:
ಸಿ.ಎಸ್.ದ್ವಾರಕಾನಾಥ್ ಸ್ಥಳೀಯ ಪೊಲೀಸ್ ಭದ್ರತೆ, ನಿಡುಮಾಮಿಡಿ ಸ್ವಾಮಿ ಮೂವರು ಅಂಗರಕ್ಷಕರ ಭದ್ರತೆ,ಡಾ.ಎಂ.ಚಿದಾನಂದಮೂರ್ತಿ ಸ್ಥಳೀಯ ಪೊಲೀಸ್ ಭದ್ರತೆ, ಬರಗೂರು ರಾಮಚಂದ್ರಪ್ಪ ಒಬ್ಬ ಅಂಗರಕ್ಷಕ, ಡಾ.ಸಿದ್ದಲಿಂಗಯ್ಯ ಒಬ್ಬ ಅಂಗರಕ್ಷಕ,ಹೆಚ್.ಎಸ್.ದೊರೆಸ್ವಾಮಿ ಸ್ಥಳೀಯ ಪೊಲೀಸ್ ಭದ್ರತೆ,ಪ್ರೊ.ಚಂದ್ರಶೇಖರ ಪಾಟೀಲ್ ಒಬ್ಬ ಅಂಗರಕ್ಷಕ ಮತ್ತು ಸ್ಥಳೀಯ ಪೊಲೀಸ್ ಭದ್ರತೆ,ಬಿ.ಗೋಪಾಲ್ ಒಬ್ಬ ಅಂಗರಕ್ಷಕ,ಡಾ.ಗಿರೀಶ್ ಕಾರ್ನಾಡ್ ಒಬ್ಬ ಅಂಗರಕ್ಷಕ,ಚಂದ್ರಶೇಖರ ಕಂಬಾರ ಒಬ್ಬ ಅಂಗರಕ್ಷಕ, ಬಿ.ಟಿ.ಲಲಿತಾನಾಯಕ್ ಸ್ಥಳೀಯ ಪೊಲೀಸ್ ಭದ್ರತೆ,ಟಿ.ಎನ್.ಸೀತಾರಾಂ ಸ್ಥಳೀಯ ಪೊಲೀಸ್ ಭದ್ರತೆ,ದಿನೇಶ್ ಅಮೀನ್ ಮಟ್ಟು ಅಂಗರಕ್ಷಕರ ಭದ್ರತೆ,ವಿಮಲಾ ಸ್ಥಳೀಯ ಪೊಲೀಸ್ ಭದ್ರತೆ, ಡಾ.ಎಸ್.ಎಂ.ಜಾಮದಾರ್ ಇಬ್ಬರು ಅಂಗರಕ್ಷಕರ ಭದ್ರತೆ.
Comments