ಜಿಎಸ್‌ಟಿ: ಇಡ್ಲಿ , ದೋಸೆ ಹಿಟ್ಟು ದರ ಇಳಿಕೆ

ಹೈದರಾಬಾದ್: ಗ್ರಾಹಕರಿಗೆ ಸಿಹಿ ಸುದ್ದಿ. ಇಡ್ಲಿ ಹಿಟ್ಟು, ದೋಸೆ ಹಿಟ್ಟು ಹೆಚ್ಚಳವಾಗಲಿದೆ ಅಂದುಕೊಂಡಿದ್ದ ಜನರಿಗೆ ಇದೀಗ ಆತಂಕದಿಂದ ಸ್ವಲ್ಪ ನಿರಾಳವಾಗಿದಂತಾಗಿದೆ. ಜತೆಗೆ ಸಣ್ಣ ಕಾರುಗಳ ದರ ಕೂಡ ಕಡಿಮೆಯಾಗಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ನಿನ್ನೆ ಸುದ್ದಿ ಗೋಷ್ಠಿ ನಡೆಸಿದರು.
ಹೈದ್ರಾಬಾದ್ : ಹೈದರಾಬಾದಿನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ನಿನ್ನೆ ಸರಕು ಹಾಗೂ ಸೇವಾ ತೆರಿಗೆ ಮಂಡಳಿ ಸಭೆ ನಡೆಸಿದರು. ಹುರಿದ ಬೇಳೆ, ಇಡ್ಲಿ ದೋಸೆ ಹಿಟ್ಟು , ರೈನ್ ಕೋಟ್, ರಬ್ಬರ್ ಬ್ಯಾಂಡ್ ಸಹಿತ 30 ವಸ್ತುಗಳ ಜಿಎಸ್ ಟಿ ದರವನ್ನು ಇಳಿಕೆ ಮಾಡಲಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಮಾರಾಟ ಮಾಡುವ ಖಾದಿಯನ್ನು ಜಿಎಸ್ ಟಿ ದರವನ್ನು ಇಳಿಕೆ ಮಾಡಲಾಗಿದೆ.
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಮಾರಾಟ ಮಾಡುವ ಖಾದಿಯನ್ನು ಜಿಎಸ್ ಟಿ ವ್ಯಾಪ್ತಿ ಯಿಂದ ಹೊರಗಿಡಲಾಗಿದೆ. ಅಷ್ಟೇ ಇಲ್ಲ, ಜಿಎಸ್ ಟಿ ಫೈಲ್ ಮಾಡುವ ದಿನಾಂಕವನ್ನು ಮುಂದಿನ ತಿಂಗಳ ಅಕ್ಟೋಬರ್ ವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಸೆ.10 ಗಡುವು ವಿಧಿಸಲಾಗಿತ್ತು. ಸಭೆ ಬಳಿಕ ಮಾತನಾಡಿರುವ ಜೇಟ್ಲಿ, ಜು. 1ರಿಂದ ಜಿಎಸ್ ಟಿ ಜಾರಿಯಾದ ಬಳಿಕ ಇದುವರೆಗೆ ತೆರಿಗೆ ಸಂಗ್ರಹ ಉತ್ತಮವಾಗಿದೆ. ಶೇ. 70ರಷ್ಟು ಅರ್ಹ ತೆರಿಗೆದಾರರಿದ್ದು, ಅವರು 95 ಸಾವಿರ ಕೋಟಿ ರೂ.ಗಳ ರಿಟರ್ನ್ಸ್ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
Comments