ಬ್ಯಾಂಕ್ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ: ಕರವೇ ಆಗ್ರಹ
ಬೆಂಗಳೂರು ಸೇರಿದಂತೆ, ದಾವಣಗೆರೆ, ಚಿಕ್ಕಬಳ್ಳಾಪುರ, ಉಡುಪಿ ಮುಂತಾದ ಕಡೆ ಪ್ರತಿಭಟನಾ ಮೆರವಣಿಗೆಗಳನ್ನು ಹಮ್ಮಿಕೊಂಡು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿರುವ ಗ್ರಾಮೀಣ ಬ್ಯಾಂಕುಗಳಲ್ಲಿರುವ ಉದ್ಯೋಗಗಳು ಕೇವಲ ಕನ್ನಡಿಗರಿಗೇ ಸಿಗಬೇಕು. ನಮ್ಮ ರಾಜ್ಯದ ಹುದ್ದೆಗಳು ಕನ್ನಡಿರಲ್ಲದೆ, ಅನ್ಯ ರಾಜ್ಯದವರ ಪಾಲಾಗಬಾರದು ಎಂದು ಅವರು ತಿಳಿಸಿದರು.ಅಲ್ಲದೆ, ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗಗಳನ್ನು ಕನ್ನಡಿಗರಲ್ಲದವರಿಗೆ ನೀಡುವಂಥ ಹುನ್ನಾರ ನಡೆಸಲಾಗುತ್ತಿದೆ. ಇದನ್ನು ಕರವೇ ಎಂದಿಗೂ ಸಹಿಸದು. ಕನ್ನಡ ನೆಲದ ಉದ್ಯೋಗಗಳಿಗೆ ಕನ್ನಡಿಗರು ಅರ್ಹರಾಗಿದ್ದಾರೆ. ಅವರಿಗೇ ಉದ್ಯೋಗಗಳು ಸಿಗಬೇಕು ಎಂದು ಅವರು ಆಗ್ರಹಿಸಿದರು.
Comments