ಭಾರೀ ಮಳೆಗೆ ನಲುಗಿದ ಲಾಲ್ ಬಾಗ್ !
ಕಳೆದ ನಾಲ್ಕು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಬೆಂಗಳೂರಿನ ರಸ್ತೆಗಳು ಹುಡುಕಲು ಸಾಸಹವೆನಿಸಿವೆ. ಮಳೆಯಿಂದಾಗಿ ಲಾಲ್ ಬಾಗ್ ಜಲಾವೃತವಾಗಿದೆ. ಕೆರೆಯಲ್ಲಿದ್ದ ನೀರಿನೊಂದಿಗೆ ಹಾವು ಇನ್ನಿತರ ಜಲಚರ ಪ್ರಾಣಿಗಳು ಮನೆಗಳಿಗೆ ಹರಿದು ಜನ ಜಾಗರಣೆ ಮಾಡುವಂತಾಗಿದೆ.
ಕೆರೆಗಳೆಲ್ಲಾ ತುಂಬಿ ಭರ್ತಿಯಾಗಿ ಪ್ರವಾಹ ರೂಪದಲ್ಲಿ ಹರಿಯುತ್ತಿವೆ. ಇದರ ಜತೆಗೆ ರಸ್ತೆಗಳ ನಡುವಲ್ಲಿ ಅಡಿಯೆತ್ತರಕ್ಕೆ ನಿಂತ ನೀರು ಸಣ್ಣ ಪುಟ್ಟ ವಾಹನಗಳನ್ನು ಮುಳುಗಿಸುತ್ತಿವೆ. ಇನ್ನು ಲಾಲ್ ಬಾಗ್ ನಲ್ಲಿ ಜನರು ಹೋಗದ ಪರಿಸ್ಥಿತಿ ಎದುರಾಗಿದ್ದು, ಬಿದ್ದ ಮರಗಳನ್ನಂತೂ ಲೆಕ್ಕವಿಲ್ಲದಷ್ಟು ಮನೆಗಳಿಗೆ ನೀರು ನುಗ್ಗಿದ ನೀರು, ಬೆಂಗಳೂರಿನ ಜನರು ಬಿಬಿಎಂಪಿ ಮೇಲೆ ಹಿಡಿಶಾಪ ಹಾಕುವಂತಾಗಿದೆ. ಲಾಲ್ ಬಾಗ್ ನಲ್ಲಿ ತುಂಬಿದ ನೀರು : ಇವೆಲ್ಲವುದರ ಮಧ್ಯೆ ಸಸ್ಯ ಕಾಶಿ ಲಾಲ್ ಬಾಗ್ ನ ಪರಿಸ್ಥಿತಿ ಹೇಳತೀರದಂತಾಗಿದ್ದು, ಕಳೆದ ತಿಂಗಳು ಫಲ-ಪುಷ್ಪ ಪ್ರದರ್ಶನ ಮುಗಿಸಿದ್ದ ಲಾಲ್ ಬಾಗ್ ಇದೀಗ ಅಲ್ಲಿನ ಸ್ಥಿತಿ ಕೆರೆಯಂತಾಗಿದೆ. ಜೋರು ಮಳೆಗೆ ಲಾಲ್ ಕೆರೆ ತುಂಬಿ ತುಳುಕುತ್ತಿದ್ದು, ಹಲವು ಮರಗಳು ಧರೆಗುರುಳಿವೆ. ಭಾರೀ ಮಳೆಗೆ ಬೇರೆ ಬೇರೆ
ಕಡೆಗಳಿಂದ ಹರಿದು ಬಂದ ನೀರು ಲಾಲ್ ಬಾಗ್ ನ ಕೆರೆಗೆ ಸೇರಿದ್ದು, ಜನರು ಓಡಾಡುವುದಕ್ಕು ಹರಸಾಹಸ ಪಡುವಂತಾಗಿದೆ.
Comments