ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು
ಬೆಂಗಳೂರು: ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 1 ವರ್ಷದ ಬಳಿಕ ಫೋರೆನ್ಸಿಕ್ ಲ್ಯಾಬ್ ವರದಿ ಬಹಿರಂಗವಾಗಿದೆ.
ಜುಲೈ 7, 2016 ರಂದು ಡಿವೈಎಸ್‍ಪಿ ಗಣಪತಿ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ರು. ಅದರೆ ಅಂದು ಗಣಪತಿ ಅವರು ಲಾಡ್ಜ್ ಗೆ ಬಂದು ಹೋಗಿರುವ ಸಿಸಿಟಿವಿ ದೃಶ್ಯಗಳು ನಾಶವಾಗಿದೆ. ಅಂದಿನ ದೃಶ್ಯಗಳ ಬದಲಿಗೆ 1999, 2001, 2004, 2008, 2014, 2015 ರವರೆಗೆ ಹಳೇ ವಿಡಿಯೋ ತುಂಬಿ, ಅಸಲಿ ವಿಡಿಯೋ ನಾಶ ಮಾಡಲಾಗಿದೆ ಅಂತ ವಿಧಿವಿಜ್ಞಾನ ಪ್ರಯೋಗಾಲಯ ವರದಿ ನೀಡಿದೆ.
ಜುಲೈ 9ರಂದು ವಿಡಿಯೋ ಸಹ ರೆರ್ಕಾಡ್ ಅಗಿದ್ದು, ಅದನ್ನ ನಾಶ ಮಾಡಲಾಗಿದೆ ಅಂತ ಫೊರೆನ್ಸಿಕ್ ಲ್ಯಾಬ್ ವರದಿ ನೀಡಿದೆ. ಡಿವಿಆರ್ ಬಳಕೆಗೆ ಯೋಗ್ಯವಾಗಿದ್ದರೂ ಅವರು ಬಂದು ಹೋಗಿರುವ ದೃಶ್ಯಗಳು ರೆಕಾರ್ಡ್ ಆಗಿಲ್ಲ. ಇದರ ಬಗ್ಗೆ ವಿನಾಯಕ ಲಾಡ್ಜ್ ಅವರನ್ನು ಸಂರ್ಕಿಸಿದಾಗ ಗಣಪತಿ ಅವರು ಮೃತಪಟ್ಟ ದಿನವೇ ಪೊಲೀಸರು ಡಿವಿಆರ್ ವಶಕ್ಕೆ ತೆಗೆದುಕೊಂಡ್ರು ಅಂತ ಹೇಳಿದ್ದಾರೆ.
Comments