ಆಧಾರ್ ಜೊತೆ ವಿಮಾನ ಟಿಕೇಟ್ ಬುಕಿಂಗ್: ಸಿಗಲಿದೆ ಡಿಜಿಟಲ್ ಬೋರ್ಡಿಂಗ್ ಪಾಸ್

ನವದೆಹಲಿ: ವಿಮಾನ ಟಿಕೇಟ್ ಬುಕ್ ಮಾಡುವವರು ಬುಕ್ ಮಾಡುವ ಸಂದರ್ಭದಲ್ಲಿ ಆಧಾರ್ ವಿವರ ನೀಡಿದಲ್ಲಿ ಅಂಥವರಿಗೆ ಡಿಜಿಟಲ್ ಬೋರ್ಡಿಂಗ್ ಪಾಸ್ ನೀಡುವ ವ್ಯವಸ್ಥೆ ಸದ್ಯದಲ್ಲೇ ಜಾರಿಗೆ ಬರಲಿದೆ.
ಆಧಾರ್, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್ ಅಥವಾ ಪ್ಯಾನ್ ಕಾರ್ಡ್ ಅನ್ನು ವಿಮಾನ ಟಿಕೇಟ್ ಬುಕ್ ಮಾಡುವ ಸಮಯದಲ್ಲಿ ಬಳಸಬಹುದಾಗಿದೆ. ಆಧಾರ್ ನಂಬರ್ ಬಳಸಿದವರಿಗೆ ಡಿಜಿಟಲ್ ಬೋರ್ಡಿಂಗ್ ಪಾಸ್ ಸಹ ನೀಡಲಾಗುವುದು ಎಂದು ಕೇಂದ್ರ ಸಚಿವ ಜಯಂತ್ ಸಿಂಗ್ ತಿಳಿಸಿದ್ದಾರೆ.
ಇದರೊಂದಿಗೆ ವಿಮಾನಯಾನದ ಸಂದರ್ಭದಲ್ಲಿ ಅನುಚಿತವಾಗಿ ವರ್ತಿಸುವವರ ವಿರುದ್ಧ 'ನೋ ಫ್ಲೈ' ಲಿಸ್ಟ್ ವೊಂದನ್ನು ತಯಾರಿಸಿ, ಆ ಪಟ್ಟಿಯ ಅಂತಿಮ ಹೆಸರುಗಳನ್ನು ಶುಕ್ರವಾರ ಪ್ರಕಟಿಸುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
Comments