ಏಕೆ ರಾಜ್ಯ ಸರಕಾರದ ಮೇಲೆ ನಂಬಿಕೆ ಇಲ್ಲ ಎಂದು ಸಹೋದರ ಇಂದ್ರಜಿತ್ ಹೇಳುತ್ತಿದ್ದಾರೆ ಗೊತ್ತಾ ?

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆಗೆ ರಾಜ್ಯ ಸರಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿರುವ ಬೆನ್ನಲ್ಲೇ ನನಗೆ ಈ ಸರಕಾರದ ಮೇಲೆ ನಂಬಿಕೆ ಇಲ್ಲ ಎಂದು ಗೌರಿ ಸಹೋದರ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
'ರಿಪಬ್ಲಿಕ್ ಟಿವಿ' ಜತೆ ಮಾತನಾಡಿರುವ ಇಂದ್ರಜಿತ್ ಲಂಕೇಶ್, "ನಾನು ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದೇನೆ, ಕಾರಣ ನನಗೆ ಕರ್ನಾಟಕ ರಾಜ್ಯದ ಗೃಹ ಇಲಾಖೆ ಬಗ್ಗೆ ನಂಬಿಕೆ ಇಲ್ಲ," ಎಂದು ಹೇಳಿದ್ದಾರೆ."ಡಿವೈಎಸ್ಪಿ ಗಣಪತಿ ಪ್ರಕರಣವೂ ನಡೆಯಿತು. ಎಂಎಂ ಕಲಬುರ್ಗಿಯವರನ್ನು ಎರಡು ವರ್ಷಗಳ ಹಿಂದೆ ಕೊಲ್ಲಲಾಯಿತು. ಇಲ್ಲಿಯವರೆಗೆ ಒಬ್ಬರನ್ನೂ ಬಂಧಿಸಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಕಳೆದ ಎರಡು ತಿಂಗಳಿಂದ ಗೃಹ ಮಂತ್ರಿ ಹುದ್ದೆಯೂ ಖಾಲಿ ಇತ್ತು.
ಇದು ಪೊಲೀಸರ ಸಮಸ್ಯೆಯಲ್ಲ. ಪೊಲೀಸರು ಕೆಲಸ ನಿರ್ವಹಿಸಲು ಸಮರ್ಥರಿದ್ದಾರೆ. ಇದು ಗೃಹ ಇಲಾಖೆಯ ಸಮಸ್ಯೆ," ಎಂದು ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಮುಂದುವರಿದು ಮಾತನಾಡಿರುವ ಅವರು, "ಈ ರೀತಿಯ ಟ್ರಾಕ್ ರೆಕಾರ್ಡ್ ಇರುವ ರಾಜ್ಯ ಸರಕಾರದಿಂದ ಕೊಲೆಗಡುಕರನ್ನು ಹಿಡಿಯಲು ಸಾಧ್ಯವೇ?" ಎಂದು ಪ್ರಶ್ನಿಸಿದ್ದಾರೆ.
Comments