ಮಂಗಳೂರು ಚಲೋ : ದಕ್ಷಿಣ ಕನ್ನಡದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಮಂಗಳೂರು: ಬಿಜೆಪಿ ಯುವಮೋರ್ಚಾ ಇಂದು ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಬೈಕ್ ಜಾಥಾಕ್ಕೆ ಭಾರೀ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದೆ.
ಮತೀಯ ಸಂಘಟನೆಗಳಾದ ಪಿಎಫ್ಐ ಸಂಘಟನೆಯ ನಿಷೇಧ ಹಾಗೂ ಸಚಿವ ರಮಾನಾಥ ರೈ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಯುವಮೋರ್ಚಾ ಮಂಗಳೂರಿನಲ್ಲಿ ಹಮ್ಮಿಕೊಂಡಿರುವ 'ಮಂಗಳೂರು ಚಲೋ' ಬೈಕ್ ಜಾಥಾ ತಡೆಯಲು ನಗರದಾದ್ಯಂತ ಪೋಲೀಸ್ ಸರ್ಪಗಾವಲು ಹಾಕಲಾಗಿದೆ.
ಜ್ಯೋತಿ ಅಂಬೇಡ್ಕರ್ ವೃತ್ತಕ್ಕೆ ನೂರಾರು ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದಾರೆ. 11 ಗಂಟೆಗೆ ಬೈಕ್ ಜಾಥಾ ಆರಂಭವಾಗುವ ನಿರೀಕ್ಷೆ ಇದೆ. ಜಾಥಾ ಮಾಡಿದರೆ ಬಂಧಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ರಾಜ್ಯದ ಬೇರೆ-ಬೇರೆ ಕಡೆಯಿಂದ ಮಂಗಳೂರಿಗೆ ಹೊರಟಿದ್ದ ಜಾಥಾವನ್ನು ಪೊಲೀಸರು ತಡೆದಿದ್ದದರು.
ಇನ್ನು ಮಂಗಳೂರು ಚಲೋ ಬೈಕ್ ಜಾಥಾ ಪರಿಣಾಮ ಸಾಕಷ್ಟು ಬಸ್ಸುಗಳು ಇಂದು ರಸ್ತೆಗೆ ಇಳಿದಿಲ್ಲ. 'ಗಲಭೆ ನಡೆದರೆ, ಕಾರ್ಯಕರ್ತರು ಬಸ್ಸುಗಳಿಗೆ ಕಲ್ಲು ತೂರಾಟ ಮಾಡಿದರೆ? ಏನು ಮಾಡುವುದು ಎನ್ನುತ್ತಾರೆ' ಬಸ್ಸಿನ ಮಾಲೀಕರೊಬ್ಬರು.
Comments