ಪ್ರವಾಹ, ಟ್ರಾಫಿಕ್ ಸಮಸ್ಯೆ ನಿವಾರಣೆಗೆ ನವೀನ ಮಾರ್ಗಗಳನ್ನು ಕಂಡುಹಿಡಿದಿರುವ ರಾಜ್ಯ ಸರ್ಕಾರ
ಬೆಂಗಳೂರು: ನಗರದ ಸಂಚಾರ ದಟ್ಟಣೆ ಮತ್ತು ಮಳೆ ಬಂದಾಗ ಪ್ರವಾಹ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ರಾಜ್ಯ ಸರ್ಕಾರ ಗ್ರಾಂಡ್ ಚಾಲೆಂಜಸ್-ಕರ್ನಾಟಕ ಅಭಿಯಾನದಡಿಯಲ್ಲಿ ಗ್ರಾಂಡ್ ಚಾಲೆಂಜ್ ಕಾಲ್ 5 ಅಂಡ್ ಕಾಲ್ 6ನ್ನು ಆರಂಭಿಸಿದೆ.
ರಸ್ತೆ ಸಂಪರ್ಕ, ಸಾರ್ವಜನಿಕ ಸಾರಿಗೆ ಕುರಿತು ಸರಿಯಾದ ಸಮಯಕ್ಕೆ ಮಾಹಿತಿ, ಸೃಜನಾತ್ಮಕ ಪಾರ್ಕಿಂಗ್ ಪರಿಹಾರ ಇತ್ಯಾದಿಗಳ ಕುರಿತು ತಂತ್ರಜ್ಞಾನಗಳ ಸಂಶೋಧನೆಯನ್ನು ಗ್ರಾಂಡ್ ಚಾಲೆಂಜ್ ಕಾಲ್ 5 ಒಳಗೊಂಡಿರುತ್ತದೆ. ಬೆಂಗಳೂರು ನಗರದ ಮೂರನೇ ಒಂದು ಭಾಗದಷ್ಟು ಜನರು ಕೆಲಸಕ್ಕೆ ಹೋಗಲು ಪ್ರಯಾಣಿಸುತ್ತಿದ್ದು ಸುಮಾರು 5 ಲಕ್ಷ ವಾಹನಗಳು ಪ್ರತಿ ವರ್ಷ ಸೇರಿಕೊಳ್ಳುತ್ತದೆ.
ಇದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿರುತ್ತದೆ. ನಗರದಲ್ಲಿನ ಟ್ರಾಫಿಕ್ ಸಮಸ್ಯೆ ಹೆಚ್ಚಳದಿಂದ ಪ್ರತಿವರ್ಷ ಶತಕೋಟಿ ಡಾಲರ್ ನಷ್ಟು ಹಣ ನಷ್ಟವಾಗುತ್ತದೆ ಎಂದು ಐಟಿ-ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಾರೆ.
ಬೆಂಗಳೂರು ನಗರದ ಸಂಚಾರ ದಟ್ಟಣೆ ಮತ್ತು ಮಳೆ ಬಂದಾಗ ಪ್ರವಾಹ ಉಂಟಾಗುವ ಸಮಸ್ಯೆಗಳಿಗೆ ಕ್ರಾಂತಿಕಾರಕ ಮತ್ತು ನವೀನ ಬದಲಾವಣೆಗಳು ಬೇಕಾಗಿದೆ. ಇದಕ್ಕೆ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Comments