ಕರ್ತವ್ಯ ನಿರತ ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣ CBI ಹೆಗಲಿಗೆ , ಜಾರ್ಜ್ ರಾಜೀನಾಮೆ ಕೊಡುವರೆ ?
ಕರ್ತವ್ಯ ನಿರತ ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ. ಮೂರು ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸಿ, ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರವು ಈ ಹಿಂದೆ ಪ್ರಕರಣವನ್ನುCIDಗೆ ವಹಿಸಿತ್ತು. ತನಿಖೆ ಕೈಗೊಂಡಿದ್ದ CID ಪ್ರಕರಣದಲ್ಲಿ B Report ಹಾಕಿ ಕೇಸ್ ಕ್ಲೋಸ್ ಮಾಡಿತ್ತು. ಇತ್ತ ಕರ್ನಾಟಕ ಬಿಜೆಪಿ ಪಕ್ಷವು ಸಿಎಂ ಸಿದ್ದು ನೇತೃತ್ವದ ಪೊಲೀಸ್ ಇಲಾಖೆ ಕಾರ್ಯವೈಫಲ್ಯವನ್ನು ಖಂಡಿಸಿ ಮಂಗಳೂರು ಚಲೋ ಹಮ್ಮಿಕೊಂಡಿರುವಾಗಲೇ ನಿಷ್ಠಾವಂತ ಪೊಲೀಸ್ ಅಧಿಕಾರಿ ಗಣಪತಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ, ಸುಪ್ರೀಂ ಆದೇಶ ಹೊರಬಿದ್ದಿರುವುದು ಬಿಜೆಪಿಗೆ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದಂತಾಗಿದೆ.
ಸುಪ್ರೀಂ ಆದೇಶವನ್ನು ಸ್ವಾಗತಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಇದು ಸತ್ಯಕ್ಕೆ ಸಂದ ಜಯವಾಗಿದೆ. ನಿಷ್ಠಾವಂತ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆಜೆ ಜಾರ್ಜ್ ಅವರ ಹೆಸರು ಥಳುಕು ಹಾಕಿಕೊಂಡಿದೆ.ಹಾಗಾಗಿ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Comments