ಲೈಟ್ ಆಫ್ ಮಾಡಿ! ಡೆಂಗ್ಯೂ, ಚಿಕನ್ ಗುನ್ಯಾನಿಂದ ಬಚಾವ್,

ದೆಹಲಿ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕಲ್ ಎಂಜಿನಿಯರಿಂಗ್ ಮತ್ತು ಬಯೋ ಟೆಕ್ನಾಲಜಿ ಸಂಸ್ಥೆ ನಡೆಸಿದ ಸಂಶೋಧನೆಯೊಂದು ಹೊರ ಬಂದಿದೆ.
ಇಷ್ಟು ದಿನ ಸೊಳ್ಳೆ ಬೆಳಿಗ್ಗೆ ಕಚ್ಚುತ್ತವೆ ಎಂದು ಜನರು ತಿಳಿದಿದ್ದರು. ಆದ್ರೆ ಸೊಳ್ಳೆಗಳು ರಾತ್ರಿಯ ವೇಳೆಯೂ ಕಚ್ಚುತ್ತವೆ ಎಂದು ವರದಿಯಿಂದ ತಿಳಿದು ಬಂದಿದೆ. ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಕಾಯಿಲೆ ಹರಡುವ ಸೊಳ್ಳೆಗಳು ರಾತ್ರಿ ವೇಳೆಯೂ ಕಚ್ಚುತ್ತವೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.ಡೆಂಗ್ಯೂ ಹರಡುವ ಸೊಳ್ಳೆ ಸೂರ್ಯ ಉದಯಿಸುವ 2 ಗಂಟೆಗಳ ತರುವಾಯ ಚಟುವಟಿಕೆ ಆರಂಭಿಸುತ್ತವೆ. ಸೂರ್ಯ ಮುಳುಗುವ ಟೈಮ್ನಲ್ಲಿ ಹಿಂದಿನ ಕೆಲ ಗಂಟೆಗಳ ಕಾಲ ಇವು ಚಟುವಟಿಕೆ ಇಂದ ಇರುತ್ತವೆ. ಈ ವೇಳೆ ಸೊಳ್ಳೆ ಕಚ್ಚುವ ಸಂಭವ ಹೆಚ್ಚಿರುತ್ತದೆ.
ಆದರೆ ರಾತ್ರಿ ವೇಳೆ ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ಮನೆಯ, ಆಫೀಸ್ ನ ಲೈಟ್ ಗಳನ್ನು ಆಫ್ ಮಾಡಿ. ರಾತ್ರಿ ವೇಳೆ ಲೈಟಿನ ಬೆಳಕಿರುವ ಪ್ರದೇಶಗಳಲ್ಲಿ ಈ ಸೊಳ್ಳೆಗಳು ಚಟುವಟಿಕೆಯಿಂದ ಇದ್ದು, ರಕ್ತ ಹೀರುತ್ತವೆ. ಡೆಂಗ್ಯೂ ಸೊಳ್ಳೆ ನೆಲಮಟ್ಟದಿಂದ ಸ್ವಲ್ಪವೇ ಎತ್ತರದಲ್ಲಿ ಹಾರಾಡುತ್ತವೆ. ಇವು ಕಾಲಿನ ಮಂಡಿಯಿಂದ ಕೆಳಭಾಗವನ್ನು ಕಚ್ಚುತ್ತವೆ. ಮಲೇರಿಯಾ ಕಾರುವ ಏಡಿಸ್ ಈಜಿಪ್ಟ್ ಸೊಳ್ಳೆಗಳು ಹಗಲು ಹಾಗೂ ರಾತ್ರಿ ಚಟುವಟಿಕೆಯಿಂದ ಇರುತ್ತವೆ. ಸಾಧ್ಯವಾದಷ್ಟು ಮಟ್ಟಿಗೆ ಬೆಳಕು ಕಡಿಮೆ ಇರುವಂತೆ ನೋಡಿಕೊಳ್ಳುವುದು, ರಾತ್ರಿ ವೇಳೆ ಬೆಳಕಿರುವ ಪ್ರದೇಶದಲ್ಲಿ ಓಡಾಡುವಾಗ ಸೊಳ್ಳೆ ಕಡಿತದ ಬಗ್ಗೆ ಮುನ್ನೆಚರಿಕೆ ವಹಿಸುವಂತೆ ಸೂಚಿಸಲಾಗಿದೆ.
Comments