ಲಿಂಗಾಯತ ಸ್ವತಂತ್ರ ಧರ್ಮ :ಸುತ್ತೂರು, ಸಿದ್ಧಗಂಗಾ ಶ್ರೀಗಳ ಬೆಂಬಲ

ಬೆಂಗಳೂರು: ಲಿಂಗಾಯತ ಸ್ವತಂತ್ರ್ಯ ಧರ್ಮ ಬೇಡಿಕೆಗೆ ಸಿದ್ಧಗಂಗಾ ಶ್ರೀಗಳು ಮತ್ತು ಸುತ್ತೂರು ಶ್ರೀಗಳು ಪರೋಕ್ಷ ಬೆಂಬಲ ವ್ಯಕ್ತಪಡಿಸುವುದರೊಂದಿಗೆ ಹೋರಾಟ ನಿಚ್ಛಳವಾಗಿದೆ ಎಂದು ತಿಳಿದು ಬಂದಿದೆ.
ಸಮಾಜದ ಒಳಿತಿಗಾಗಿ ನಡೆಯುವ ಸಮಷ್ಠಿ ಹೋರಾಟಕ್ಕೆ ನನ್ನ ಬೆಂಬಲವಿದೆ. ಬಸವ ತತ್ವ ಬಿಟ್ಟು ಅಸ್ತಿತ್ವ ಇಲ್ಲ, ಬಸವ ಬೇರೆಯಲ್ಲ, ಯಡಿಯೂರು ಸಿದ್ಧಲಿಂಗ ಬೇರೆಯಲ್ಲ ಎಂಬ ಅಭಿಪ್ರಾಯವನ್ನು ಸಿದ್ಧಗಂಗಾ ಕಿರಿಯ ಶ್ರೀಗಳು ವ್ಯಕ್ತಪಡಿಸಿದ್ದಾರೆ ಎಂದು ಕೂಡಲ ಸಂಗಮದ ಜಯಮೃಂತ್ಯುಂಜಯ ಸ್ವಾಮೀಜಿ ಮತ್ತು ಸ್ವತಂತ್ರ ಲಿಂಗಾಯತ ಧರ್ಮ ಹೋರಾಟ ಸಮಿತಿ ಸಂಚಾಲಕ ಎಸ್.ಎಂ ಜಾಮದಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುತ್ತೂರು ಶ್ರೀಗಳ ಜತೆ ಚರ್ಚಿಸಿದ್ದೇನೆ, ಗೊಂದಲ ನಿವಾರಣೆಗೆ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಬೇಕು. ವೀರಶೈವರು ಮತ್ತು ಲಿಂಗಾಯತರು ನಮ್ಮದೇ ಶ್ರೇಷ್ಠ ಎಂದು ಪರಸ್ಪರ ಅಭಿಪ್ರಾಯ ಪಡುತ್ತಿದ್ದಾರೆ. ತಜ್ಞರ ಸಮಿತಿ ವೈಚಾರಿಕ ವೈರುಧ್ಯಗಳನ್ನು ವಾಸ್ತವಿಕ ನೆಲೆಯಲ್ಲಿ ಅಧ್ಯಯನ ಮಾಡಲಿ, ಸಮಿತಿ ನೀಡುವ ವರದಿ ಆಧಾರದಲ್ಲಿ ಪ್ರತ್ಯೇಕ ಧರ್ಮ ಮಾನ್ಯತೆಗೆ ರಾಜ್ಯ ಸರ್ಕಾರ
ಕೇಂದ್ರಕ್ಕೆ ಶಿಫಾರಸು ಮಾಡಲಿ ಎಂದು ಆಗ್ರಹಿಸಿದರು.
Comments