ನೀಟ್ ಪರೀಕ್ಷೆಯ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ತಮಿಳುನಾಡು ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ

ಈ ಘಟನೆ ಶುಕ್ರವಾರ ನಡೆದಿದೆ. 17 ವರ್ಷದ ಎಸ್ ಅನಿತ ಮೃತ ದುರ್ದೈವಿ. ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗಲಿಲ್ಲವೆಂದು ಅನಿತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಚೆನ್ನೈನ ಅರಿಯಲುರು ಜಿಲ್ಲೆಯ ಗ್ರಾಮವೊಂದರ ದಿನಗೂಲಿ ಕಾರ್ಮಿಕರ ಮಗಳಾಗಿರೋ ಅನಿತ ಬೋರ್ಡ್ ಎಕ್ಸಾಂ ನಲ್ಲಿ 1,200 ಅಂಕಗಳಿಗೆ 1,176 ಅಂಕಗಳನ್ನು ಗಳಿಸಿದ್ದರು. ಆಕೆ ವೈದ್ಯೆಯಾಗಬೇಕೆಂಬ ಕನಸು ಹೊತ್ತಿದ್ದರು. ಆದ್ರೆ ನೀಟ್‍ಪರೀಕ್ಷೆ ಚೆನ್ನಾಗಿ ಬರೆದಿರಲಿಲ್ಲ. ಹೀಗಾಗಿ ಪ್ರವೇಶಾತಿ ಸಿಕ್ಕಿರಲಿಲ್ಲ. ಅನಿತ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೋಷಕರು ಹೇಳಿದ್ದಾರೆ.
ವಿದ್ಯಾರ್ಥಿನಿ ಆತ್ಮಹತ್ಯೆಗೆ ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ಕಮಲ್ ಹಾಸನ್ ಟ್ವಿಟ್ಟರ್‍ನಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
Comments